ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಇಡೀ ದೇಶವನ್ನು ಕೊರೊನಾ ಮುಕ್ತ ಮಾಡಲು ಮಕ್ಕಳು ಹೊರೆತು ಪಡಿಸಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಹಾಕಲಾಗುತ್ತಿತ್ತು. ವಾರದ 7 ದಿನವೂ ಲಸಿಕೆ ಹಾಕುವ ಅಭಿಯಾನಕ್ಕೆ ಈಗ ಒಂದು ದಿವಸ ಬಿಡುವು ದೊರೆತಿದೆ.
ಇದರಿಂದ ಈಗ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ೭ ದಿವಸ ವ್ಯಾಕ್ಸಿನ್ ಹಾಕಬೇಕಾಗಿದ್ದ್ದರಿಂದ ಯಾವುದೇ ರಜೆ ಇಲ್ಲದೇ, ನಿರಂತರವಾಗಿ ಆರೋಗ್ಯ ಸಿಬ್ಬಂದಿ ಕೆಲಸ ಮಾಡುತ್ತಿದ್ದರು.
ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗೆ ಭಾನುವಾರ ರಜೆ ನೀಡಲು ಇಲಾಖೆ ಚಿಂತಿಸಿದ್ದು ರಾಜ್ಯದಲ್ಲಿ ಇನ್ಮುಂದೆ ಭಾನುವಾರ ಕೊರೊನಾ ಲಸಿಕೆ ಹಾಕದಿರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

























Discussion about this post