ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ಕಮಲಾ ನೆಹರೂ ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ಇದ್ದಕ್ಕಿದ್ದಂತೆ ಬೆಂಕಿ ಆಕಸ್ಮಿಕ ಸಂಭವಿಸಿ ನವಜಾತ ಶಿಶುಗಳ ವಿಶೇಷ ಆರೈಕೆ ಘಟಕ (ಎಸ್ಎನ್ಸಿಯು)ದಲ್ಲಿ ನಾಲ್ಕು ಹಸುಳೆಗಳು ಸಾವನ್ನಪ್ಪಿವೆ. ಈ ಬೆಂಕಿ ಅವಘಡವು ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಸಂಭವಿಸಿದೆ ಎನ್ನಲಾಗಿದೆ.
ಬೆಂಕಿ ಮೊದಲು ಆಸ್ಪತ್ರೆಯ ಮೂರನೇ ಮಹಡಿಯಲ್ಲಿ (ಐಸಿಯು) ರಾತ್ರಿ 9ರ ಸುಮಾರಿಗೆ ಕಾಣಿಸಿಕೊಂಡಿತು. 8ರಿಂದ 10 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯ ಮಾಡಿವು ಎಂದು ಅಗ್ನಿ ಶಾಮಕ ದಳ ಅಧಿಕಾರಿ ಜುಬೇರ್ ಖಾನ್ ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ದೊರೆತಕೂಡಲೆ ಸ್ಥಳಕ್ಕೆ ಹೋದವು. ವಾರ್ಡ್ನಲ್ಲಿ ಕತ್ತಲು ಕವಿದಿತ್ತು. ಶಿಶುಗಳನ್ನು ಪಕ್ಕದ ವಾರ್ಡ್ಗೆ ಸ್ಥಳಾಂತರ ಮಾಡಲಾಗುತ್ತಿತ್ತು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸರಾಂಗ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಪಾಲಕರು ಆಘಾತಗೊಂಡರು. ರಕ್ಷಣೆಗಾಗಿ ತಾವೇ ವಾರ್ಡ್ಗಳತ್ತ ನುಗ್ಗಿದರು ಎಂದು ಸಚಿವರು ಹೇಳಿದ್ದಾರೆ.
ನಾಲ್ಕು ಲಕ್ಷ ರೂ. ಪರಿಹಾರ ಘೋಷಣೆ:
ಘಟನೆ ಬಗ್ಗೆ ಶೋಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮೃತಪಟ್ಟ ಮಕ್ಕಳ ಪಾಲಕರಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ವಿಶೇಷ ಆರೈಕೆ ಕೇಂದ್ರದಲ್ಲಿ ಬೆಂಕಿ ಅನಾಹುತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮೂರು ಮಕ್ಕಳನ್ನು ರಕ್ಷಿಸಲು ನಮ್ಮಿಂದ ಆಗಲಿಲ್ಲ ಎಂದು ಚೌಹಾಣ್ ಖೇದ ವ್ಯಕ್ತಪಡಿಸಿದ್ದಾರೆ. ಅವರು ಈ ಟ್ವೀಟ್ ಮಾಡಿದ ನಂತರದಲ್ಲಿ ಗಾಯಗೊಂಡಿದ್ದ ಇನ್ನೊಂದು ಮಗು ಸಾವನ್ನಪ್ಪಿತು.
ಅಗ್ನಿ ಅವಘಡದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ಹೆಚ್ಚುವರಿ ಮುಖ್ಯ ಕಾರ್ಯದಶರ್ಶಿ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ ಎಂದು ಇನ್ನೊಂದು ಟ್ವೀಟ್ನಲ್ಲಿ ಸಿಎಂ ಹೇಳಿದ್ದಾರೆ.
Four Newborns Killed In Bhopal Hospital Fire
ಇದನ್ನು ಓದಿ: ಮಹಾರಾಷ್ಟ್ರದ ಅಹಮದ್ನಗರದ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡಕ್ಕೆ 11 ರೋಗಿಗಳು ಬಲಿ
ಇದನ್ನು ಓದಿ: ಹೆರಿಗೆ ಆಸ್ಪತ್ರೆಯಲ್ಲಿ ಬೆಂಕಿ: ಬಾಣಂತಿ-ಮಗುವಿಗೂ ರಕ್ಷಣೆಗೆ ಒದ್ದಾಟ
Discussion about this post