- ಸಾಮೂಹಿಕ ಮತಾಂತರದ ಆರೋಪ
- ಕೊಪ್ಪದ ಚೌಕಿ ಗ್ರಾಮದಲ್ಲಿ ೨ ವರ್ಷಗಳಲ್ಲಿ ೪೫ಕ್ಕು ಹೆಚ್ಚು ಮಂದಿ ಮತಾಂತರ
- ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ಮತಾಂತರ ಎಂದು ಹಿಂದೂ ಸಂಘಟನೆಗಳ ಕೂಗು
- ಏನು ಬೇಕಾದರೂ ಸವಲತ್ತು ನೀಡ್ತೇವೆ ಎಂಬ ಆಮಿಶ
ಘಟನೆಯ ವಿವರ: ಗಣೇಶ್ ಮುಕ್ತಿ ವಾಹನ ಚಾಲಕರಾಗಿ ೧೫ ದಿನಗಳ ಹಿಂದೆ ಓರ್ವ ಕ್ರೈಸ್ತ ಮತದ ವ್ಯಕ್ತಿಯ ನಿಧನವಾದಾಗ ಶರೀರ ಸಾಗಾಣಿಕೆ ಮಾಡಿದ್ದರು. ಇದೇ ವೇಳೆ ನಾಗರಾಜ್ ಇವನೊಂದಿಗೆ ಸ್ನೇಹ ಬೆಳೆಸಿದ್ದ. ಕ್ರೈಸ್ತ ಧರ್ಮಕ್ಕೆ ಬನ್ನಿ, ನಿಮಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡುತ್ತೆವೆ ಎಂದು ಪ್ರಚೋಧನೆ ಸಹ ನೀಡಿರುತ್ತಾನೆ. ಇದಲ್ಲದೆ ಆಗಾಗ ಭೇಟಿ ಮಾಡಿ ಪ್ರಚೋದನೆ ಮಾಡಿರುತ್ತಾನೆ.
ಚೌಕಿಯ ಚೆಲುವರಾಜು ಎಂಬ ವ್ಯಕ್ತಿ ಮನೆಗೆ ಗಣೇಶ್ ಕರೆಸಿದ್ದರು, ಇದೇ ವೇಳೆ ಮತಾಂತರಕ್ಕೆ ಒತ್ತಡ ಹೇರಿದ್ದು, ಕೆಲವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ನಡೆದುಕೊಂಡಿದ್ದರು ಎಂದು ದೂರು ದಾಖಲಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ದೂರುದಾರರು ಗಣೇಶ್ ಗೆ ಒತ್ತಾಯಿಸಿದ್ದಾರೆ.
ಮತಾಂತರ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಹಲವು ಗಲಾಟೆಗಳು ನಡೆದಿದ್ದು, ಚರ್ಚ್ ಧಾಳಿ ಸಹ ನಡೆದಿತ್ತು. ಪೊಲೀಸ್ ಇಲಾಖೆ ಮತ್ತು ಸರ್ಕಾರ ಸೂಕ್ತ ಕ್ರಮ ಕೈಗೊಂಡರೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದು. ಚಿಕ್ಕಮಗಳೂರು: ಕಳೆದ ಎರಡು ವರ್ಷಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಿರುವ ಜನರು ಹೆಚ್ಚಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊಪ್ಪದ ಚೌಕಿಯಲ್ಲಿ ಚೆಲುವರಾಜು ಮತ್ತು ಪತ್ನಿ ವಾಸವಿದ್ದು, ಮೊದಲು ಪತ್ನಿ ಮತಾಂತರಗೊಂಡಿದ್ದಾರೆ. ನಂತರ ಪತಿಯೂ ಪತ್ನಿಯ ದಾರಿಯನ್ನೇ ತುಳಿದಿದ್ದಾರೆ. ಮನೆಯ ಎದುರಿಗಿದ್ದ ಹಿಂದೂ ದೇವರುಗಳಾದ ಶಿವ, ಗಣಪನ ಫೋಟೋ ಸಹ ತೆಗೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮಸ್ಥರಲ್ಲೇ ಹಲವು ಕುಟುಂಬಗಳು ಮತಾಂತರ ಹೊಂದಿವೆ ಎಂಬುದು ಸಹ ಈಗ ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ, ಊರಿನ ಗಣೇಶ್ ಹಾಗೂ ಇತರೆ ಯುವಕರಿಗೂ ಕ್ರಿಶ್ಚಿಯನ್ ಮತಕ್ಕೆ ಮತಾಂತರ ಹೊಂದುವಂತೆ ಪ್ರಚೋದನೆ ನೀಡಿರುವ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.
ಹಿಂದೂ ಸಂಘಟನೆಗಳ ಪ್ರತಿಭಟನೆ ನಂತರ ಗಣೇಶ್ ಅವರ ದೂರಿನ ಆಧಾರದ ಮೇಲೆ ನಿನ್ನೆ ರಾತ್ರಿಯೇ ನಾಗರಾಜ್ ಎಂಬಾತನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.
ಇದಕ್ಕೆಲ್ಲಾ ಕಿಂಗ್ ಪಿನ್ ಆಗಿದ್ದ ಕೇಶವ ತಲೆಮರೆಸಿಕೊಂಡಿದ್ದಾನೆ. ಈತನಿಗೆ ಪ್ರಭಾವಿಗಳ ಬೆಂಬಲ ಸಹ ಇದೆ, ಆದ್ದರಿಂದ ಅರೆಸ್ಟ್ ಮಾಡ್ತಿಲ್ಲ, ಇವನಿಂದಲೇ ಮತಾಂತರ ನಡೆಯುತ್ತಿರೋದು ಅಂತ ಹಿಂದೂ ಸಂಘಟನೆಗಳು ಆರೋಪ ಮಾಡ್ತಾ ಇದೆ.
ಇದಕ್ಕೆ ಸಾಕ್ಷಿ ಎಂಬಂತೆ ಗಣೇಶ್ ಎಮ್ಬಾತ ಪುರುಷೋತ್ತಮ ಎಂಬುವರ ಮೂಲಕ, ’ತನಗೆ ಇಷ್ಟವಿಲ್ಲದಿದ್ದರೂ ಮತಾಂತರ ಮಾಡಿಸುತ್ತಿದ್ದಾರೆ’ ಎಂದು ಲಿಖಿತ ದೂರು ನೀಡಿದ್ದಾನೆ. ತನಿಖೆ ನಡೆಸಿದ ಪೊಲೀಸರಿಗೆ ಕಳೆದ ಎರಡು ವರ್ಷಗಳಲ್ಲಿ ೮ ಕುಟುಂಬದ ೪೫ಕ್ಕೂ ಹೆಚ್ಚು ಮಂದಿ ಮತಾಂತರಗೊಂಡಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

























Discussion about this post