ಉತ್ತರ ಪ್ರದೇಶ: ಅತ್ತೆ ಮೇಲೆ ದ್ವೇಷ ಸಾಧಿಸಲು ಹೋದ ಸೊಸೆ ಮನೆಮಂದಿಗೆ ವಿಷ ಹಾಕಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಹ್ರೀಚ್ ಮಚಿಯಾಹಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸೊಸೆ ಅನಿತಾ ಈ ದುಷ್ಕೃತ್ಯ ಎಸಗಿದ್ದಾರೆ.
ಚಹಾವನ್ನು ಮೊದಲೇ ತಯಾರಿಸಿ, ವಿಷ ಬೆರೆಸಿ ಮನೆಯವರಿಗೆ ನೀಡಿದ್ದು, ಅನಿತಾಳ ಅತ್ತಿಗೆ ಮಗು (೧೮ ತಿಂಗಳು)ಅಸುನೀಗಿದೆ. ಕಳೆದ ಡಿಸೆಂಬರ್ ನಲ್ಲಿ ಅನಿತಾ ವಿವಾಹವಾಗಿದ್ದರು, ಆದ್ರೆ ಅತ್ತೆ ಯಾವಾಗಲೂ ಜಗಳ ಮಾಡುತ್ತಿದ್ದು, ಪ್ರತೇಕ ವಾಸವಿದ್ದ ಸೊಸೆ ಆಗಾಗ ಬಂದು ಎಲ್ಲರೊಂದಿಗೆ ಚೆನ್ನಾಗಿರುವಂತೆ ನಟಿಸುತ್ತಿದ್ದರು ಎನ್ನಲಾಗಿದೆ.
ಮನೆಯ ಸದಸ್ಯರಾದ ಮಾವ ಪಂಚಮ್ ಜೈಸ್ವಾಲ್, ಸೋದರ ಮಾವ ಜಿತೇಂದ್ರ, ಸೊಸೆ ಶಿವಾನಿ ಮತ್ತು ಸೃಷ್ಠಿ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ಜೈಸ್ವಾಲ್ ನೀಡಿದ ದೂರಿನನ್ವಯ ಪೊಲೀಸರು ಅನಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

























Discussion about this post