ಹುಬ್ಬಳ್ಳಿ: ಮೇಲಾಧಿಕಾರಿ ಕಿರುಕುಳ ತಾಳಲಾರದೆ ಜೀವನ ಸಾಕಪ್ಪ ಎಂದು ಆರೋಗ್ಯ ನಿರೀಕ್ಷಕ ಆತ್ಮಹತ್ಯೆ ಯತ್ನ ಮಾಡಿದ ಘಟನೆ ನಡೆದಿದೆ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಮೆಹಬೂಬ್ ಸಾಬ್ ಸೂಡಿಯೇ ಆ ಆರೋಗ್ಯ ನಿರೀಕ್ಷಕನಾಗಿದ್ದು, ಸದ್ಯ ಬದುಕುಳಿದಿದ್ದಾರೆ.
ಘಟನೆ ವಿವರ
ಮೆಹಬೂಬ್ ಸಾಬ್ ನೂಲ್ವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದರು, ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ ಕಿರುಕುಳ ನೀಡುತ್ತಿದ್ದು ಇವರು ಬೇಸತ್ತು ಹೋಗಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ಅಧಿಕಾರಿಯನ್ನು ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಆರೋಗ್ಯ ಸ್ಥಿರ ವಾಗಿದೆ ಎಂದು ಮೂಲಗಳು ತಿಳಿಸಿದೆ.

























Discussion about this post