ಉಡುಪಿ: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ಸಿಎಸ್ಐಆರ್ (CSIR) ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಉಡುಪಿಯ ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ರಾಷ್ಡ್ರಮಟ್ಟದ ಪ್ರಶಸ್ತಿಯ ಗರಿ ಲಭಿಸಿದೆ.
ಉಡುಪಿಜಿಲ್ಲೆಯ ಕುಂದಾಪುರದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಾಲೆಯ ಅನುಷಾ ಹಾಗೂ ರಕ್ಷಿತಾ ನಾಯ್ಕ ಇವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇವರಿಂದ ಆನ್ಲೈನ್ ಮೂಲಕ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸ್ಪರ್ಧೆಯ ಕೊನೆಯ ಹಂತಕ್ಕೆ ಆಯ್ಕೆಯಾದ ದೇಶದ 14 ಶಾಲೆಗಳಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ದೇಶದಲ್ಲೇ ಆಯ್ಕೆಯಾದ ಏಕೈಕ ಸರಕಾರಿ ಶಾಲೆಯಾಗಿದೆ.
ಸಮಾಜ ವಿಜ್ಞಾನ ಶಿಕ್ಷಕರಾದ ಸುರೇಶ ಮರಕಾಲ ಹಾಗೂ ವಿಜ್ಞಾನ ಶಿಕ್ಷಕಿ ಶ್ರೀಮತಿ ವೈಶಾಲಿ ರಾವ್ ಮಾರ್ಗದರ್ಶನದಲ್ಲಿ ಅನುಷಾ ಹಾಗೂ ರಕ್ಷಿತಾ ನಾಯ್ಕ ಇವರು ರಚಿಸಿದ ಗ್ಯಾಸ್ ಸೇವಿಂಗ್ ಕಿಟ್ ಎಂಬ ಅತ್ಯಂತ ಸರಳ ಉಪಕರಣವು ರಾಷ್ಟ್ರಮಟ್ಟದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದು ಇದಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದೆ. ಇದು ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರೇರಣೆ ತರುವ ವಿಷಯವಾಗಿದೆ.

























Discussion about this post