ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮಕ್ಕೆ ಸಾರಿಗೆ ಬಸ್ ಗಳ ವ್ಯವಸ್ಥೆಯೇ ಇಲ್ಲ. ಮೊಳಕಾಲ್ಮೂರನ್ನು ಸಾರಿಗೆ ಸಚಿವ ಶ್ರೀರಾಮುಲು ಪ್ರತಿನಿಧಿಸುತ್ತಾರೆ. ಆದ್ರೆ ಸಾರಿಗೆ ಸಚಿವರ ಕ್ಷೇತ್ರದ ಗ್ರಾಮವೊಂದರಲ್ಲಿ ಬಸ್ ಸೇವೆಗೆ ವ್ಯವಸ್ಥೆ ಕಲ್ಪಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಲೂ ಮಕ್ಕಳು, ಮಹಿಳೆಯರು ಸೇರಿದಂತೆ ಜನರು ಬಸ್ ಗಳಿಲ್ಲದೆ ನಾಲ್ಕಾರು ಕಿ.ಮೀ ನಡೆಯುವ ದುಸ್ಥಿತಿ ಹಾಗೇ ಮುಂದುವರೆದಿದೆ. ಅನಾರೋಗ್ಯದವರ, ಬಸುರಿಯರಿಗೆ ಇದರಿಂದ ಬಹಳ ತೊಂದರೆಯೇ ಆಗುವುದು.
ಕಣಕುಪ್ಪೆ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಅತಿಹೆಚ್ಚು ಸಮಸ್ಯೆ ಎದುರಾಗಿದೆ. ಅಟೋಗಳಲ್ಲಿ ಕುರಿತುಂಬಿದಂತೆ ತುಂಬಿಕೊಂಡು ಹೋಗುವವರೊಂದಿಗೆ ವಿದ್ಯಾರ್ಥಿಗಳು ಹೋಗದೆ ಬೇರೆ ದಾರಿ ಇಲ್ಲ. ಇನ್ನು ಕೆಲವು ವಿದ್ಯಾರ್ಥಿಗಳಿಗೆ ಆಟೋಗೆ ಕೊಡಲು ಹಣ ಇರಲ್ಲ. ಅಂತವರು ನಡೆಯದೇ ಬೇರೆ ದಾರಿ ಇಲ್ಲ.
ಸರ್ಕಾರಕ್ಕೆ ಬೇಕಾದಾಗ ಮಾತ್ರ ಬಸ್ ಬಿಡ್ತಾರೆ ಎಂಬ ಆರೋಪ ಕೂಡಾ ಕೇಳಿಬರ್ತಿದೆ. ಏಕೆಂದರೆ ಫೆಬ್ರವರಿ 20ರಂದು ಡಿಸಿ ಕವಿತಾ ಮನ್ನಿಕೇರಿ ಗ್ರಾಮ ವಾಸ್ತವ್ಯ ಹೂಡಿದ್ದರು. ಡಿಸಿ ಸೂಚನೆ ಮೇರೆಗೆ ಆಗ ಕೆಲ ದಿನ ಮಾತ್ರ ಬಸ್ ಸಂಚಾರ ನಡೆದಿತ್ತು.
ಆದ್ರೆ ಮತ್ತೆ ಎಂದಿನಂತೆ ಬಸ್ ಕತೆ ಅಲ್ಲಿಗೆ ನಿಂತಿತು. ಈಗ ವಿದ್ಯಾರ್ಥಿಗಳು ಸೇರಿದಂತೆ ಕಣಕುಪ್ಪೆ ಗ್ರಾಮಸ್ಥರು ಸರ್ಕಾರಕ್ಕೆ ಹಿಡಿ ಹಿಡಿ ಶಾಪ ಹಾಕ್ಕೊಂಡೇ ಓಡಾಡ್ತಾರೆ

























Discussion about this post