ದಾವಣಗೆರೆ: ಸಿಲಿಂಡರ್ ಸ್ಫೋಟಗೊಂಡಿದ್ದು ಮನೆಯೊಂದು ಹೊತ್ತಿ ಉರಿದು ಬೂದಿಯಾದ ಘಟನೆ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ವೀಣಾ ಎಂಬ ಮಹಿಳೆ ಮನೆಯಲ್ಲಿ ಸಿಲಿಂಡರ್ ಬದಲಿಸುವ ವೇಳೆ ಈ ಘಟನೆ ನಡೆದಿದ್ದು, ಅವರ ಕೈಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಸಂದರ್ಭ ಮನೆಯಲ್ಲಿ ೩ ಮಂದಿ ಇದ್ದು, ಬೆಂಕಿ ಉರಿಯುತ್ತಿದ್ದಂತೆ, ಮಹಿಳೆ, ಮಕ್ಕಳು ಹೊರಗೆ ಬಂದಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದರು. ಇದೇ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

























Discussion about this post