ಕನ್ನಡನಾಡಿ ನ್ಯೂಸ್ ಬ್ಯೂರೋ: ಮಂಡ್ಯದ ಜಿದ್ದಾಜಿದ್ದಿನ ರಾಜಕಾರಣಕ್ಕೆ ಪ್ರಮುಖ ಅಸ್ತ್ರವಾಗಿದ್ದು, ಅಕ್ರಮ ಗಣಿಗಾರಿಕೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಸಂಸದೆ ಸುಮಲತಾ, ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು, ಆದರೆ, ಜಿಲ್ಲಾಡಳಿತ, ಅಕ್ರಮದ ಜೊತೆ ಸಕ್ರಮ ಕಲ್ಲುಗಣಿಗಾರಿಕೆಯನ್ನು ಏಕಾಏಕಿ ಸ್ಥಗಿತಗೊಳಿಸಿತ್ತು. ಇದು ಜಿಲ್ಲೆಯ 6 ಮಂದಿ ಜೆಡಿಎಸ್ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಇದೇ ವಿಚಾರವನ್ನ ಸದನದಲ್ಲಿ ಪ್ರಸ್ತಾಪಿಸಿ ಚರ್ಚಿಸಲು ಮುಂದಾಗಿದ್ದಾರೆ.
ಸಕ್ರಮ ಗಣಿಗಾರಿಕೆಯನ್ನು 3 ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಜನಸಾಮಾನ್ಯರು ಮನೆ, ಮಠ ನಿರ್ಮಿಸಲಾಗದೆ ಹೊರ ಜಿಲ್ಲೆಗಳಿಂದ ದುಪ್ಪಟ್ಟು ಹಣ ನೀಡಿ ಕಟ್ಟಡ ಸಾಮಾಗ್ರಿ ತರ್ತಾ ಇದ್ದಾರೆ ಎನ್ನಲಾಗಿದೆ. ಅತ್ತ ಗಣಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮಧ್ಯೆ ಪ್ರವೇಶಿಸಿ ಜನರಿಗೆ ನ್ಯಾಯ ಒದಗಿಸಬೇಕಾಗಿತ್ತು. ಆದರೆ, ಸರ್ಕಾರವಾಗಲಿ, ಗಣಿ ಸಚಿವರಾಗಲಿ ಇತ್ತ ಗಮನ ಹರಿಸದೇ ಇರೋದು ಆರೋಪಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 13ರಿಂದ ಪ್ರಾರಂಭವಾಗಲಿರುವ ಸದನದಲ್ಲಿ ಈ ಕುರಿತು ಜೆಡಿಎಸ್ ಶಾಸಕರು ಗಂಭೀರವಾಗಿ ಚರ್ಚೆ ನಡೆಸಲಿದ್ದಾರೆ. ಸಂಸದೆ ಸುಮಲತಾ ಲೆಟರ್ ಹೆಡ್ ದುರ್ಬಳಕೆ ವಿಚಾರವೂ ಇದರಲ್ಲಿ ಸೇರಿಹೋಗಿದೆ. ಸಂಸದರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ದೇಶದ ಆಸ್ತಿ KRS ಡ್ಯಾಂ ಬಗ್ಗೆ ಅನಾಮಧೇಯ ವ್ಯಕ್ತಿ ಮಾಹಿತಿ ಪಡೆದುಕೊಳ್ಳೋದು ಅಪೆನ್ಸ್. ಆದರೂ ಅಧಿಕಾರಿಗಳಿಗೂ ಬೆದರಿಕೆ ಹಾಕಲಾಗಿದ್ದು, ಇದರ ಬಗ್ಗೆಯು ಅಸೆಂಬ್ಲಿಯಲ್ಲಿ ಚರ್ಚೆ ಮಾಡ್ತೀನಿ ಎಂದು ಶಾಸಕ ರವಿಂದ್ರ ಶ್ರೀಕಂಠಯ್ಯ ಗುಡುಗಿದ್ದಾರೆ.
ಇದರ ಹಿಂದೆ ಚುನಾವಣಾ ರಾಜಕೀಯದ ಉದ್ದೇಶ ಇದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭಿಷೇಕ್ ಅಂಬರೀಶ್ ಮಂಡ್ಯದಿಂದಲೇ ಕಣಕ್ಕಿಳಿಯಲಿದ್ದಾರೆ. ಹೇಗಾದರೂ ಸರಿ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿಯತ್ತ ಸೆಳೆಯಬೇಕು ಎಂಬುದು ಕೇಸರಿ ನಾಯಕರ ಉದ್ದೇಶ. ಹೀಗಿರುವಾಗ ದಳ ಶಾಸಕರು V/S ಸಂಸದೆ ಸುಮಲತಾ ಮತ್ತು ಬಿಜೆಪಿ ಸರ್ಕಾರ ಆಗಿದೆ. ಕಲ್ಲು ಗಣಿಗಾರಿಕೆ ಸಮಸ್ಯೆಗಳು ಸದನದಲ್ಲಿ ಪ್ರತಿಧ್ವನಿಸುತ್ತವೆ.

























Discussion about this post