ಕಾಶ್ಮೀರ: ಪ್ರತ್ಯೇಕಾವದಿ ಸಂಘಟನೆ ಹುರಿಯಾತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ (೯೨) ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಗೆ ಬಿಗಿ ಬಧ್ರತೆ ಒದಗಿಸಲಾಗಿದ್ದು, ಇಂಟರ್ನೆಟ್ ಸ್ಥಗಿತಗೊಳಿಸಿ, ಸೇರಲಿರುವ ಜನಸ್ತೋಮಕ್ಕೆ ತಪಾಸಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಮಾಧ್ಯಮಗಳ ಪ್ರಕಾರ ಗಿಲಾನಿಯವರ ಅಂತ್ಯಕ್ರಿಯೆ ಶ್ರೀನಗರ ಹುತಾತ್ಮ ಚೌಕದಲ್ಲಿ ನಡೆಯಲಿದೆ. ನ್ಯಾಷನಲ್ ಕಾನ್ಫರೆನ್ಸ್ ಸಯ್ಯದ್ ಮಸೂದಿ ನೇತೃತ್ವದಲ್ಲಿ ರಾಜಕೀಯ ಜೀವನ ಆರಂಭಿಸಿದ್ದರು. ನಂತರ ಜಾಮಾ ಅತೆ ಇಸ್ಲಾಮಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರೂ ಸಹ, ೨೦೦೪ರಲ್ಲಿ ಆ ಸಂಘಟನೆಯಿಂದ ದೂರವಾಗಿ ತೆಹ್ರೀರಿಕ್ ಎ ಹುರಿಯಾತ್ ಎಂಬ ಪ್ರತ್ಯೇಕ ಸಂಘಟನೆ ಸ್ಥಾಪಿಸಿಕೊಂಡಿದ್ದರು. ಅವರು ಪ್ರತ್ಯೇಕವಾದದ ನಿಲುವು ಹೊಂದಿದ್ದರು.

























Discussion about this post