ನವದೆಹಲಿ: ಸ್ತ್ರೀಯರ ಮದುವೆಯ ಕನಿಷ್ಠ ವಯೋಮಿತಿಯನ್ನು 18ರಿಂದ 21ಕ್ಕೆ ಹೆಚ್ಚಿಸುವ ಮಸೂದೆಯ ಪರಿಶೀಲನೆಗೆ ಸಂಸತ್ನ 31 ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯಲ್ಲಿ ಓರ್ವ ಮಹಿಳೆ ಮಾತ್ರ ಇರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬಿಜೆಪಿಯ ಹಿರಿಯ ನಾಯಕ ವಿನಯ್ ಸಹಸ್ರಬುದ್ಧೆ ಈ ಸಮಿತಿಯ ಮುಖ್ಯಸ್ಥರಾಗಿದ್ದು, 31 ಸದಸ್ಯರನ್ನು ಸಮಿತಿ ಒಳಗೊಂಡಿದೆ. ಟಿಎಂಸಿ ಸಂಸದೆ ಸುಷ್ಮಿತಾ ದೇವ್ ಸಮಿತಿಯಲ್ಲಿ ಇರುವ ಏಕೈಕ ಸದಸ್ಯೆ ಆಗಿದ್ದಾರೆ. ಹೀಗಾಗಿ ಇನ್ನಷ್ಟು ಮಹಿಳಾ ಸದಸ್ಯರು ಇರಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೂ ಎಲ್ಲ ವರ್ಗಗಳ ಬೇಡಿಕೆ, ಹಿತಾಸಕ್ತಿ ಕುರಿತು ಸಮಿತಿ ಗಮನ ಸೆಳೆಯುವುದಾಗಿ ಅವರು ಸುಷ್ಮಿತಾ ದೇವ್ ಹೇಳಿದ್ದಾರೆ.
ಯಾವುದೇ ಸಂಸದರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಮಿತಿಯ ಅಧ್ಯಕ್ಷರಿಗೆ ಅಧಿಕಾರ ಇದೆ. ಹೀಗಾಗಿ ಅವರು ಹೆಚ್ಚು ಮಹಿಳಾ ಸಂಸದರ ಅನಿಸಿಕೆಯನ್ನು ಕೇಳಬೇಕು ಎಂದು ಎನ್ಸಿಪಿ ನಾಯಕಿ ಸುಪ್ರಿಯಾ ಸುಲೆ ಒತ್ತಾಯಿಸಿದ್ದಾರೆ.
ಕಳೆದ ಚಳಿಗಾಲ ಅಧಿವೇಶದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗುತ್ತಿದ್ದಂಗೆ ಪ್ರತಿಪಕ್ಷಗಳು ಇದನ್ನು ಜಂಟಿ ಸದನ ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದಿದ್ದವು. ಅದರಂತೆ ಸರ್ಕಾರ ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಲು ಒಪ್ಪಿತ್ತು.
Parliamentary panel of 1 woman, 30 male MPs to review bill to raise legal marriage age for women
ಇದನ್ನು ಓದಿ: ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸು 18 ರಿಂದ 21ಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಇದನ್ನೂ ಓದಿ: Ban on child marriage: ಲೋಕಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ವಿಧೇಯಕ 2021 ಮಂಡನೆ
Discussion about this post