ಹೈದ್ರಾಬಾದ್: ಯಾರನ್ನ ನಂಬೋದು, ಯಾರನ್ನಾ ಬಿಡೋದು? ಏನೋ ಅಕ್ಕಪಕ್ಕದವರಲ್ವಾ ಅಂತ ಮಕ್ಕಳು ಆಡಿಕೊಳ್ಳಲು ಹೋದ್ರೆ, ಅತ್ಯಾಚಾರ, ಕೊಲೆ ನಡೆಸುತ್ತಾರಾ? ಹೌದು ಅಂತ ಹೇಳತ್ತೆ ಈ ಘಟನೆ.
ನೆರೆಯಮನೆಯ ವ್ಯಕ್ತಿಯೇ ಬಾಲಕಿಯನ್ನು ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಧಾರುಣ ಘಟನೆ ಸೆಪ್ಟೆಂಬರ್ ೯ರಂದು ಸೈದಾಬಾದ್ ಪೊಲೀಸ್ ಠಾಣೆ ಮಿತಿಯಲ್ಲಿ ನಡೆದಿದೆ.
ಗುರುವಾರ ಸಂಜೆಯಿಂದ ಕಾಣೆಯಾಗಿದ್ದ ಬಾಲಕಿಯನ್ನು, ಪೋಷಕರು ರಾತ್ರಿವರೆಗೂ ಹುಡುಕಾಡಿದರೂ ಪತ್ತೆಯಾಗದೆ ಇದ್ದದ್ದರಿಂದ ಸೈದಾಬಾದ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಪೊಲೀಸರಿಗೆ ದೂರು ನೀಡಿದ ನಂತರ, ನೆರೆ ಮನೆಯ ವ್ಯಕ್ತಿ ಕೂಡಾ ಕಾಣೆಯಾಗಿದ್ದು ಅನುಮಾನ ಬಂದಿದ್ದರಿಂದ, ಪೊಲೀಸರೊಂದಿಗೆ ಹೋಗಿ ಹುಡುಕಾಟ ನಡೆಸಿದ್ದರು. ಆದರೆ ಆತ ಅದಾಗಲೇ ತಲೆ ಮರೆಸಿಕೊಂಡಿದ್ದಾನೆ.
ಇದೇ ವೇಳೆ ಬಾಲಕಿಯ ಮೃತದೇಹ ಬೆಡ್ಶೀಟ್ನಲ್ಲಿ ಸುತ್ತಿರುವುದನ್ನು ಕಂಡುಬಂದಿದೆ. ಪಾಲಕರಿಗೆ ಇದು ಬಹಳ ನೋವಿನ ಸಂಗತಿಯಾಗಿದೆ.
ಪೊಲೀಸರು ಆರೋಪಿಯ ವಿರುದ್ದ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೂ ಆರೋಪಿಯ ಬಂಧನ ನಡೆದಿಲ್ಲ
Discussion about this post