ಹಾಸನ : ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ಅನಿಲ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸಂಪೂರ್ಣ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಅನಿಲ ಸೋರಿಕೆ ಉಂಟಾಗಿದೆ. ಟ್ಯಾಂಕರ್ ಉರುಳಿದ ತೀವ್ರತೆಗೆ ವಾಹನದ ಚಾಲಕ ಇಂಜಿನ್ ಒಳಗೆ ಸಿಲುಕಿಕೊಂಡಿದ್ದ, ನಂತರ ಆತನನ್ನು ಕ್ರೇನ್ ನ ಸಹಾಯದ ಮೂಲಕ ಹೊರತೆಗೆದು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಗ್ಯಾಸ್ ಸಾಗಿಸುತ್ತಿದ್ದ ಭಾರತ್ ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ ಉಂಟಾದ ಕಾರಣ ಮುನ್ನೆಚ್ಚರಿಕಾ ಸಲುವಾಗಿ ಕೆಲ ಸಮಯ ಸಂಪೂರ್ಣ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನಂತರದಲ್ಲಿ ಪೊಲೀಸರು ಬೇರೆ ಮಾರ್ಗದ ಮೂಲಕ ಸಂಚಾರ ಮಾಡಲು ಅವಕಾಶ ಕಲ್ಪಿಸಿದರು.
ಕೆಲಕಾಲಾನಂತರ ಲಘುವಾಹನಗಳು, ಸರ್ಕಾರಿ ಬಸ್ಸುಗಳು ಚಾರ್ಮಾಡಿ ಘಾಟ್ ನ ಮೂಲಕವಾಗಿ ಸಂಚಾರ ಆರಂಭಿಸಿದ್ದು ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

























Discussion about this post