ಹಾಸನ: ಇಲ್ಲಿನ ಅರಸೀಕೆರೆ ಸಮೀಪದ ಗ್ರಾಮವೊಂದರಲ್ಲಿ ಗೌರಿ ಪೂಜೆಗೆಂದು ಆಗಮಿಸಿದ್ದ ಕೋಡಿ ಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದು, ಅಫ್ಘನ್ ತಾಲಿಬಾನಿಗಳಿಂದ ಜಗತ್ತಿಗೆ ಸಂಚಕಾರ ಕಾದಿದೆ ಎಂದಿದ್ದಾರೆ.
ಅಫ್ಘಾನ್ ರಾಷ್ಟ್ರವನ್ನೇ ನರಕ ಮಾಡಿಕೊಂಡು, ಸಮಾಧಿಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ಉಗ್ರವಾದಿಗಳಿಂದ ತುಂಬಿರುವ ತಾಲಿಬಾನ್ ಗಳಿಂದ ಜಗತ್ತಿಗೆ ಆಪತ್ತು ಎಂದು ಹೇಳಿರುವ ಭವಿಷ್ಯ ಭಾರತ ದೇಶಕ್ಕೂ ಆತಂಕ ಉಂಟುಮಾಡುವ ವಿಚಾರ.
ಇದೇ ವೇಳೆ ಮಳೆ ಹೀಗೆಯೆ ಹೆಚ್ಚುತ್ತಿದ್ದು, ಇದರಿಂದ ಸಾಕಷ್ಟು ನಷ್ಟಗಳೂ ಆಗುವುದು ಎಂದಿದ್ದಾರೆ. ಹಲವು ಕಡೆ ಭೂಮಿ ನಡುಗುವುದು ಸಹ ನಡೆಯುವುದು ಎಂದು ಭವಿಷ್ಯ ಹೇಳಿದ್ದಾರೆ.
ಕನ್ನಡ ನಾಡಿ ಈಗಾಗಲೇ ಎರಡು ಭಾರಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ, ಗಡಿ ಭಾಗದ ಜಿಲ್ಲೆಗಳಲ್ಲಿ ಭೂಮಿ ನಡುಗುತ್ತಿರುವ ವರದಿಗಳನ್ನು ಪ್ರಕಟಿಸಿತ್ತು. ಇನ್ನು ಮುಂದೆಯೂ ಹೀಗೆ ಮರುಕಳಿಸುವ ಸಾಧ್ಯತೆ ಇದೆ ಎಂದು ಕೋಡಿ ಮಠದ ಸ್ವಾಮಿಗಳು ಹೇಳಿದ್ದಾರೆ.

























Discussion about this post