ಬೆಂಗಳೂರು: RSSನವರು ಯಾರೂ ಕೂಡಾ ದೇಶಭಕ್ತರೇ ಅಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರೂ ಅಲ್ಲ. ಇವರು ಕೂಡಾ ತಾಲಿಬಾನಿಗಳ ಹಾಗೆ ಕೈಯಲ್ಲಿ ದೊಣ್ಣೆ ಹಿಡಿದು ಬರುತ್ತಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಟೀಕೆ ಮಾಡಿದರು.
ಮಾಜಿ. ಸಿ.ಎಂ. ಆರ್. ಗುಂಡೂರಾವ್ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮ ದಲ್ಲಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು,ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲಿ ವಂದೇ ಮಾತರಂ ಎಂದು ಹಾಡದೆ ದೂರ ಇದ್ದವರೆಲ್ಲಾ ಇಂದು ಗೀತೆ ಹೇಳಲು ಶುರುಮಾಡಿದ್ದಾರೆ ಎಂದು ಆರ್ ಎಸ್ ಎಸ್ ಅನ್ನು ಲೇವಡಿ ಮಾಡಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುವ ಬಿಜೆಪಿ ಪಕ್ಷ ಇಸ್ಲಾಂ, ಕ್ರೈಸ್ತ ಸಮುದಾಯದ ಯಾರೊಬ್ಬರಿಗೂ ಕೇಂದ್ರ ಮಂತ್ರಿ ಪದವಿ ಕೊಟ್ಟಿಲ್ಲ. ಗಾಂಧಿ, ಅಂಬೇಡ್ಕರ್, ಪಟೇಲ್ ಅವರನ್ನೆಲ್ಲಾ ದ್ವೇಷದಿಂದ ನೋಡುತ್ತಿದ್ದ ಬಿಜೆಪಿಗೆ ಸಡನ್ ಆಗಿ ಪ್ರೀತಿ ಉಕ್ಕಿದೆ ಎಂದು ಕುಟುಕಿದರು.
ಗಾಂಧೀಜಿ ಯವರರನ್ನ ಗೌರವಿಸುವುದು ಎಂದರೆ ಅವರ ಫೋಟೋ ಗೆ ಹೂ ಹಾಕುವುದಲ್ಲ, ಅವರ ಚಿಂತನೆಗಳ ಪಾಲನೆ ಮಾಡಿ, ಅವರ ಕನಸಿನ ಭಾರತ ನಿರ್ಮಾಣಕ್ಕೆ ಶ್ರಮಿಸುವುದು ಎಂಬುದನ್ನು ಬಿಜೆಪಿ ನಾಯಕರು ಮೊದಲು ಅರ್ಥೈಸಬೇಕು ಎಂದು ಇದೇ ವೇಳೆ ಬಿಜೆಪಿಗೆ ಸಲಹೆ ನೀಡಿದರು.

























Discussion about this post