ಬಾಗಲಕೋಟೆ: ತಾಲಿಬಾನಿಗಳಿಗೆ ರಾಕ್ಷಸಿ ಪ್ರವೃತ್ತಿ ಇರುತ್ತೆ. ಮನುಷ್ಯತ್ವ ಇರಲ್ಲ. ಹೀಗಾಗಿ ತಾಲಿಬಾನಿಗಳು ಎನ್ನುತ್ತಾರೆ. ಅದೇ ರೀತಿ ಆರ್ ಎಸ್ ಎಸ್ ನವರದ್ದು ತಾಲಿಬಾನ್ ಸಂಸ್ಕೃತಿ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಇಲ್ಲ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಬಾಗಲಕೋಟೆ ಬಾದಾಮಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಆರ್ ಎಸ್ ಎಸ್ ನವರು ತಾಲಿಬಾನಿಗಳು, ಆರ್ ಎಸ್ ಎಸ್, ಬಿಜೆಪಿಗೆ ಮನುಷ್ಯತ್ವವೇ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಅಧಿವೇಶನವನ್ನು 15 ದಿನಗಳ ಕಾಲ ನಡೆಸುವಂತೆ ಹೇಳಿದೆವು. ಆದರೆ ಸಿಎಂ ಬೊಮ್ಮಾಯಿ, ಸ್ಪೀಕರ್ ಕಾಗೇರಿ ನಮ್ಮ ಮಾತನ್ನು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವತಃ ಸಿಎಂ ಬೊಮ್ಮಾಯಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬಿಜೆಪಿ ನಾಯಕರು ತಪ್ಪು ಮಾಡಿದ್ದಾರೆ. ಹಾಗಾಗಿ ಈ ಬಗ್ಗೆ ಸದನದಲ್ಲಿ ಚರ್ಚೆಯಾಗಬಾರದು ಎಂಬ ಕಾರಣಕ್ಕೆ ಹತ್ತೇ ದಿನಕ್ಕೆ ಅಧಿವೇಶನವನ್ನು ಮುಗಿಸಿದರು ಎಂದು ಸಾತ್ವಿಕ ರೋಷ ವ್ಯಕ್ತಪಡಿಸಿದರು.

























Discussion about this post