ಬೆಂಗಳೂರು: ಮಕ್ಕಳಿಗೆ ವ್ಯಾಕ್ಸಿನ್ ಆಗದ ಕಾರಣ ಪಾಲಕ ಆತಂಕದಲ್ಲಿರುವಾಗಲೇ, ರಾಜ್ಯ ಸರ್ಕಾರ ಹೇಳಿದ್ದಂತೆ ಶಾಲೆಗೆ ಇಂದು ಆಗಸ್ಟ್ 23 (August 23)ರಂದು ಶುಭಾರಂಭ ಹೇಳಿದೆ. ಆನ್ ಲೈನ್ ಮೂಲಕ ಇದ್ದ ವ್ಯವಸ್ಥೆಯನ್ನು ಹಂತ ಹಂತವಾಗಿ ಸರಿದಾರಿಗೆ ತರುವ ನಿಟ್ಟಿನಲ್ಲಿ ಶಾಲಾ ಪ್ರಾರಂಭ ( School Reopen) ಇದೊಂದು ಮಹತ್ವದ ಹೆಜ್ಜೆಯಾಗಿದೆ. ಸರ್ಕಾರಿ, ಖಾಸಗಿ ಶಾಲೆಗಳಿಗೆ ಸುರಕ್ಷತಾ ಮಾರ್ಗಸೂಚಿ ನೀಡಿದೆ.
ಬಹುತೇಕ ಶಿಕ್ಷಕರೆಲ್ಲರಿಗೂ ವ್ಯಾಕ್ಸಿನ್ ನೀಡಿದ್ದು ಶಾಲೆಗಳನ್ನು ಸ್ಯಾನಿಟೈಜ್ ಮಾಡಲಾಗುತ್ತದೆ. ಇದರಿಂದ ಪಾಲಕರು ಆತಂಕ ಬಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಬಹುದಾಗಿದೆ, ಶಾಲಾ ಆರಂಭದ ಕೆಲ ದಿವಸ ತಾವೂ ಮತ್ತು ಶಿಕ್ಷಣ ಸಚಿವರು ಶಾಲೆಗಳಿಗೆ ಭೇಟಿ ನೀಡುವೆವು ಎಂದು ಸಿ ಎಂ ಬೊಮ್ಮಾಯಿ ತಿಳಿಸಿದ್ದಾರೆ.
ಪಾಲಕರೆಲ್ಲರೂ ವ್ಯಾಕ್ಸಿನ್ ಹಾಕಿಕೊಳ್ಳಬೇಕು, ಮಕ್ಕಳಿಗೆ ಹಂತ ಹಂತವಾಗಿ ತರಗತಿಗಳನ್ನು ಪ್ರಾರಂಭಿಸಲಾಗುವುದು, ಮಾರ್ಗಸೂಚಿಗಳನ್ನು ಅನುಸರಿಸಿ ತರಗತಿ ನಡೆಯುವುದು ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಯಾವ್ಯಾವ ಡೇಂಜರ್ ಝೋನ್ ಗಳಲ್ಲಿ ಶಾಲೆ ಇಲ್ಲ:
ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ೯-೧೨ನೇ ತರಗತಿಯವರೆಗೆ ಶಾಲೆ ಪ್ರಾರಂಭ.
ಮಾರ್ಗಸೂಚಿಗಳಲ್ಲಿ ಏನೇನಿದೆ?
೧. ಶಾಲೆಯಲ್ಲಿ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದರೆ ಒಂದು ವಾರ ಶಾಲೆ ಸೀಲ್ಡೌನ್
೨. ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯುವಂತಿಲ್ಲ
೩. ಕೊರೊನಾ ಲಕ್ಷಣ ಕಂಡು ಬರುವ ಮಗುವನ್ನು ಶಾಲೆಗೆ ಕಳುಹಿಸುವಂತಿಲ್ಲ.
೪. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ
೫. ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಬೇಕು
೬. ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಶಾಲೆಗೆ ಬರಬೇಕು.
೭. ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 72 ಗಂಟೆಗಳ ಅಂತರದಲ್ಲಿ ಪಡೆದ ಕೊವಿಡ್ ನೆಗೆಟಿವ್ ವರದಿ ಸಲ್ಲಿಸಬೇಕು
೮. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇಲ್ಲ
೯. ಆನ್ ಲೈನ್ ಹಾಗೂ ಆಫ್ ಲೈನ್ ಎರಡಕ್ಕೂ ಅವಕಾಶ ಸಾಧ್ಯತೆ
೧೦. ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ
ಶಾಲಾ ಪ್ರಾರಂಭದ ಮೊದಲು ಅನುಸರಿಸಬೇಕಾದ ನಿಯಮಗಳು
೧. ಇಡೀ ಶಾಲಾ ಆವರಣದ ಸ್ಯಾನಿಟೈಜ್ ಮಾಡುವುದು
೨. ಕುಡಿಯುವ ನೀರಿನ ಸೌಲಭ್ಯ ಮಾಡುವುದ, ಅದನ್ನು ನಿಯಮಿತವಾಗಿ ಶುಚಿಗೊಳಿಸುವುದು
೩. ಶಾಲಾ ವಾಹನಗಳಲ್ಲೂ ಸಾಮಾಜಿಕ ಅಂತರ ಕಾಪಾಡುವುದು
೪. ಶಾಲಾ ಆವರಣದಲ್ಲಿ ಸಾಮಾಜಿಕ ಅಂತರ ಕಾಯದುಕೊಳ್ಳುವ ಬಾಕ್ಸ್ ನಿರ್ಮಾಣ
೫. ಶಾಲಾ ಆವರಣದ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಅಳವಡಿಸುವುದು
೬. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆ ಪ್ರವೇಶಿಸುವುದು.
೭. ವಿದ್ಯಾರ್ಥಿಗಳು ಆಗಾಗ ಕೈ ಶುಚಿಗೊಳಿಸುವುದು
೮. ಕಾಯಿಸಿದ ನೀರು ಮನೆಯಿಂದ ತರುವುದು
೯.ಬಿಸಿಯಾದ ಆಹಾರ ತರುವುದು
೧೦. ಪುಸ್ತಕ, ಬ್ಯಾಗು, ಪೆನ್ನು ಇತ್ಯಾದಿ ಯಾವುದೇ ವಸ್ತುಗಳನ್ನು ಇತರರೊಂದಿಗೆ
ಹಂಚಿಕೊಳ್ಳಬಾರದು.

























Discussion about this post