ಮಂಡ್ಯ: ಎಲ್ಲವನ್ನು ಕಾಂಗ್ರೆಸ್ ಪಕ್ಷದವರೇ ಕೊಟ್ಟಿದ್ದಾರೆ ಎಂಬ ಭ್ರಮೆಯನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಅನ್ನಪೂರ್ಣೇಶ್ವರಿ ಹೆಸರು ಹೇಳುತ್ತಿದ್ದೇವೆ. ಅನ್ನಪೂರ್ಣೇಶ್ವರಿ ಬಿಜೆಪಿ ನಾಯಕಿಯಂತೂ ಅಲ್ಲ ಎಂದು ಇಂದಿರಾ ಕ್ಯಾಂಟಿನ್ ಹೆಸರು ಬದಲಿಸುವ ವಿಚಾರದಲ್ಲಿ ಮತ್ತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತನಾಡಿದ್ದಾರೆ.
ಕಾಂಗ್ರೆಸ್ ತನ್ನ ಪಕ್ಷದ ನೇತಾರರ ಹೆಸರನ್ನು ರಾಜಕೀಯ ಕಾರಣಕ್ಕೆ ಇಡುತ್ತೆ ಅನ್ನೋದಾದರೆ, ರಾಜಕೀಯದ ಹೊರತಾಗಿ ಆಲೋಚನೆ ಮಾಡ್ತೇವೆ ನಾವು. ಯಾವ ರಾಜಕಾರಣದ ಬಣ್ಣ ಇರಬಾರದು. ಕ್ಯಾಂಟೀನ್ ಅನ್ನು ರಾಜಕೀಯದಿಂದ ಸಾಂಸ್ಕೃತಿಕ ಬಣ್ಣಕ್ಕೆ ಬದಲಾಯಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ೧೭ ವಿವಿಧ ಯೋಜನೆಗಳಿಗೆ ಒಂದೇ ಕುಟುಂಬದ ಹೆಸರು ಇದೆ, ಆದರೆ ಜನ ಅಭಿಮಾನದಿಂದ ಹೆಸರು ಕೊಡುವುದು ಬೇರೆ ಎಂದು ಹೇಳಿದ್ದಾರೆ. ಭಾರತ ರತ್ನವನ್ನು ಮೊದಲ ಪ್ರಧಾನಿಯಾಗಿದ್ದ ನೆಹರು ಅವರಿಗೆ ಕೊಡಲಾಗಿದೆ, ನಂತರ ಇಂದಿರಾ ಗಾಂಧಿ ಸಹ ಅವರಿಗೇ ಡಿಕ್ಲೇರ್ ಮಾಡಿಕೊಂಡ್ರು. ರಾಜೀವ್ ಗಾಂಧಿಗೆ ೯೧ನೇ ಇಸವಿಯಲ್ಲಿ ಕೊಟ್ಟಿದ್ರು.
ಅಂಬೇಡ್ಕರ್ ಗೆ ಕೊಡುವುದಕ್ಕೆ ೯೦ರವರೆಗೆ ಕಾಯ್ದೆವು. ಅಂಬೇಡ್ಕರ್ ಅವರಿಗೆ ಕೊಡೋಕೆ ಅಟಲ್ ಜೀ ಪ್ರಪೊಸ್ ಮಾಡಬೇಕಾಗಿತ್ತು. ನಮ್ಮ ಬಿಜೆಪಿ ಬೆಂಬಲ ನೀಡಿದ್ದಾಗ ಭಾರತರತ್ನ ಕೊಟ್ಟಿದ್ದು. ಇಂತಹ ತಾರತಮ್ಯ ಸರಿಯಾಗಬೇಕು. ಸರ್ಕಾರದ ಯೋಜನೆಗಳಿಗೆ ಅವರೇ ಕೊಟ್ಟಿದ್ದಾರೆಂಬ ಭ್ರಮೆ ನಿರ್ಮಾಣ ಮಾಡಿದ್ದಾರೆ ಎಂದವರು ಸುದ್ದಿಗಾರರೊಂದಿಗೆ ತಿಳಿಸಿದರು.
ನಾಲ್ಕು ತಲೆಮಾರು ರಾಜಕಾರಣ ಮಾಡಿದ್ದಾರೆ, ಆದ್ರೆ ಮಹಾತ್ಮ ಗಾಂಧಿ ಮಕ್ಕಳು ಅದೆಷ್ಟು ಮಂದಿ ರಾಜಕಾರಣದಲ್ಲಿದ್ದಾರೆ? ದೇಶದಿಂದ ಕೊಟ್ಟಿದ್ದನ್ನ ಮಾತ್ರ ನೆನಪಿಸುತ್ತಾರೆ, ಅವರ ಸಾಲಿನಲ್ಲಿ ನಡೆಸಿದ ಹಗರಣವನ್ನೂ ನೆನಪಿಸಬೆಕು, ಲಕ್ಷ ಲಕ್ಷ ಕೋಟಿ ಹಗರಣ ಮಾಡಿದ್ದಾರೆ, ಇದರ ಹೊಣೆ ಯಾರು ಹೊರುತ್ತಾರೆ? ಎಂದು ಗಾಂಧಿ ಕುಟುಂಬದ ಹೆಸರು ಹೇಳದೆ ಸಿಟಿ ರವಿ ವಾಗ್ದಾಳಿ ನಡೆಸಿದರು.

























Discussion about this post