ಕನ್ನಡನಾಡಿ ಸುದ್ದಿ ಜಾಲ ( ಕಲ್ಬುರ್ಗಿ) ಕರ್ನಾಟಕ ಮತ್ತು ಆಂಧ್ರದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ಜನರಲ್ಲಿ ಜೀವ ಭಯ ಶುರುವಾಗಿದೆ. ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಭೀತಿ ಸೃಷ್ಟಿಸಿದ ಘಟನೆ ಚಿಂಚೋಳಿ ಗ್ರಾಮದ ಹಲವು ಗ್ರಾಮಗಳಲ್ಲಿ ನಡೆದಿದೆ.
ಗಡಿಕೇಶ್ವರ, ಹೊಸಳ್ಳಿ, ಕೆರಳ್ಳ, ರಾಯಖೋಡಿಯಲ್ಲಿ ಭೂಮಿಯ ಕಂಪನ ನಡಿದಿದ್ದು ದೃಢಪಟ್ಟಿದೆ. ಕಲಬುರಗಿ ಶಾಸಕ ಉಮೇಶ್ ಜಾದವ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ೨೦೧೬, ೨೦೧೭ರಲ್ಲಿ ಸಹ ಈ ಘಟನೆ ಜರುಗಿತ್ತು, ಈಗ ಭೂಕಂಪ ತೀವ್ರತೆ ಕಡಿಮೆ ಇರುವ ಕಾರಣ ಭೂಕಂಪನ ನಡೆದಿಲ್ಲ, ಈಗಾಗಲೇ ಜಿಲ್ಲೆಯ ಡಿಸಿ, ಗಣಿ ಅಧಿಕಾರಿಗಳ ಜೊತೆ ಮಾತನಾಡಿರೋದಾಗಿ ಅವರು ಹೇಳಿದರು.
ತೆಲಂಗಾಣದ ಗಡಿ ಭಾಗಗಳಲ್ಲಿ ೨೦ಸೆಕೆಂಡ್ ಕಾಲ ಭೂಕಂಪನ ಘಟಿಸಿದ್ದಿ, ಮನೆಯ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ತೆಲಂಗಾಣ- ಕರ್ನಾಟಕ ಗಡಿ ಭಾಗಗಳಲ್ಲಿ ಈ ಅನುಭವ ಬಂದಿದ್ದು, ರಾತ್ರಿ ಜಾಗ್ರತೆ ವಹಿಸಿ ನಿದ್ದೆ ಮಾಡಲು ಸೂಚಿಸಲಾಗಿದೆ.
ಇವತ್ತು (೨೦)ರಾತ್ರಿ ೭-೨೯ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಸುಮಾರು ಇಪ್ಪತ್ತು ನಿಮಿಷಗಳ ಕಾಲ ಘಟನೆ ಸಂಭವಿಸಿದೆ. ತೆಲಂಗಾಣದ ಸ್ಥಳೀಯ ಆಡಳಿತ ಮಂಡಳಿಯ ವತಿಯಿಂದ ಡಂಗೂರ ಹೊಡೆಸಿ ಎಚ್ಚರಿಕೆ ನೀಡಲಾಗಿದೆ.

























Discussion about this post