ಬೆಂಗಳೂರು: ರಾಜದಾನಿಯಲ್ಲಿ ಅದಾಗಲೇ ಡೈರಿ ಸರ್ಕಲ್ ಹತ್ತಿರ ಎರಡು ಕಟ್ಟಡಗಳು ಕುಸಿದ ಘಟನೆಗಳು ನಡೆದಿದ್ದು ಇಂದು ಕಸ್ತೂರಿ ನಗರದಲ್ಲಿ ಕಟ್ಟಡ ಕುಸಿದ ಮತ್ತೊಂದು ಘಟನೆ ವರದಿಯಾಗಿದೆ. ನಾಗರಬಾವಿಯಲ್ಲಿ ಸಹ ಕಟ್ಟಡ ವಾಲಿದ್ದ ಘಟನೆ ನಡೆದಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ರೆಡ್ಡಿ ಶಂಕರ್ ಬಾಬು ರಾಜಕಾಲುವೆ ಬಳಿ ಕಟ್ಟಡ ನಿರ್ಮಾಣ ಮಾಡಿದವರಿಗೆ ನೋಟಿಸ್ ನೀಡ್ತೇವೆ ಎಂದಿದ್ದರು.
೫ ಅಂತಸ್ತಿನ ಕಟ್ಟಡ ಕಸ್ತೂರಿ ನಗರದಲ್ಲಿಂದು ಕುಸಿದಿದ್ದು ಯಾವುದೇ ಪ್ರಾಣಾಪಾಯ ನಡೆದಿಲ್ಲ ಎನ್ನಲಾಗಿದೆ. ೨೦೧೯ರಲ್ಲಿ ನಡೆದಿದ್ದ ಸರ್ವೆ ಪ್ರಕಾರ ನಗರದಲ್ಲಿ ೧೮೫ ಶಿಥಿಲ ಕಟ್ಟಡಗಳಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದರು.
ಮಾಲೀಕರು ತಾವಾಗಿಯೇ ಕಟ್ಟಡ ತೆರವು ಗೊಳಿಸದಿದ್ದರೆ ಬಿಬಿಎಂಪಿ ಜಂಟಿ ಆಯುಕ್ತರೇ ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ. ಅಕಸ್ಮಾತ್ ಅವರು ಕ್ರಮ ಕೈಗೊಳ್ಳದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೆವೆ ಎಂದು ವಿಧಾನಸೌಧದಲ್ಲಿ ಆರ್. ಅಶೋಕ್ ಹೇಳಿಕೆ ನೀಡಿದ್ದರು.

























Discussion about this post