ಚಿಕ್ಕಮಗಳೂರು: ಕಳೆದ ಎರಡು ವರ್ಷದ ಹಿಂದೆ ಸುರಿದ್ದ ಜಡಿಮಳೆಯಿಂದ ಮನೆ ಕಳೆದುಕೊಂಡವರು ಮನೆಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮೂಡಿಗೆರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
೨೦೧೯ರಲ್ಲಿ ಮೂಡಿಗೆರೆ ತಾಲೂಕಿನ ಮಳೆಮನೆ ಗ್ರಾಮದ ಅಶ್ವಥ್, ರಾಜೇಶ್, ರಾಜು, ಸತೀಷ್, ರವಿಚಂದ್ರೇಗೌಡರ ಮನೆಗಳು ಮಳೆಯ ಹೊಡೆತಕ್ಕೆನೆಲ ಕಂಡಿದ್ದವು. ಅಧಿಕಾರಿಗಳು, ಶಾಸಕರು, ಸಚಿವರು, ಮಂತ್ರಿಗಳ ಬಳಿಗೆ ಹೋಗಿದ್ದಷ್ಟೇ, ಪರಿಹಾರ ಶೂನ್ಯ ಎಂದು ಸಂತ್ರಸ್ತರು ದೂರಿದ್ದಾರೆ.
ಒಂದು ತಿಂಗಳ ಹಿಂದೆ ಸಹ ಕಪ್ಪು ಬಟ್ಟೆ ಧರಿಸಿ ಮೂಡಿಗೆರೆ ತಾಲೂಕು ಕಚೇರ ಎದುರು ಧರಣಿ ನಡೆಸಿದ್ದರು. ಸಂತ್ರಸ್ತರಿಗೆ ಶಾಶ್ವತ ನೆರವು ಒದಗಿಸಬೇಕೆಂದ ಅವರು ಮತ್ತೆ ಒತ್ತಾಯಿಸಿದ್ದಾರೆ.
ಜಾಬಳಿ, ಮಲೆಮನೆಯ ವಸತಿರಹಿತ ಸಂತ್ರಸ್ತರು ಸರ್ಕಾರದ ದಿವ್ಯ ನಿರ್ಲಕ್ಷ್ಯ ಖಂಡಿಸಿ, ಮುಂಬರುವ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಸಹ ಎಚ್ಚರಿಕೆ ನೀಡಿದರು.
Discussion about this post