• Home
  • About Us
  • Contact Us
  • Terms of Use
  • Privacy Policy
Monday, October 13, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Spiritual: ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

News Desk by News Desk
Sep 24, 2025, 08:31 pm IST
in ಆಧ್ಯಾತ್ಮ
Share on FacebookShare on TwitterTelegram

Spiritual: ಈ ಕೆಲಸಗಳನ್ನು ಮಾಡಿದ್ರೆ ನಿಮ್ಮ ಜೀವನವೇ ನರಕವಾಗಬಹುದು..

ಭಗವದ್ಗೀತೆಯಲ್ಲಿ ಜೀವನ ಸಾರ ಹೇಳಿರುವ ಶ್ರೀಕೃಷ್ಣ, ಕೆಲ ಕೆಲಸಗಳನ್ನು ಮಾಡಿದರೆ, ನಮ್ಮ ಜೀವನವೇ ನರಕವಾಗುತ್ತದೆ ಎಂದಿದ್ದಾನೆ. ಹಾಗಾದರೆ ಅಂಥ ಕೆಲಸಗಳು ಯಾವುದು ಅಂತಾ ತಿಳಿಯೋಣ.

ದುರಾಸೆ: ಮನುಷ್ಯನಿಗೆ ಆಸೆ ಇರುವುದು ಸಹಜ. ಅಂಥ ಆಸೆಗಳನ್ನು ನೆರವೇರಿಸಿಕ“ಳ್ಳಲು ಮನುಷ್ಯ ಮೈ ಬಗ್ಗಿಸಿ ದುಡಿಯುತ್ತಾನೆ. ತನ್ನ ಆಸೆ ಆಕಾಂಕ್ಷೆಗಳನ್ನು ಪೂರೈಸಿಕ“ಳ್ಳುತ್ತಾನೆ. ಆದರೆ ಅದೇ ಆಸೆ ದುರಾಸೆಯಾದರೆ, ಜೀವನವನ್ನೇ ಪಣಕ್ಕಿಡುವ ಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ ದುರಾಸೆಯಿಂದ ಮನುಷ್ಯ ಯಾವುದು ತಪ್ಪು, ಯಾವುದು ಸರಿ ಎನ್ನುವುದನ್ನೇ ಮರೆಯುತ್ತಾನೆ. ಮಾತುಗಳು ಅಡ್ಡಾದಿಡ್ಡಿಯಾಗುತ್ತದೆ. ಮನಸ್ಸು ಕಲುಶಿತವಾಗುತ್ತದೆ. ಹಾಗಾಗಿಯೇ ಎಷ್ಟೋ ಗಂಡಸರು, ಪತ್ನಿ, ಗರ್ಲ್ಫ್ರೆಂಡ್ ದುರಾಸೆಗಳನ್ನು ಪೂರೈಸಲು ಹತ್ಯೆ , ದರೋಡೆಯಂಥ ಅಡ್ಡದಾರಿ ಹಿಡಿಯುತ್ತಾರೆ. ಇದರಿಂದ ಅವರ ಜೀವನವೇ ನರಕವಾಗುತ್ತದೆ.

ದ್ರೋಹ: ಯಾರಿಗಾದರೂ ದ್ರೋಹ ಮಾಡಿ, ನಾನು ಸುಖವಾಗಿರುತ್ತೇನೆ ಎಂದು ಮನುಷ್ಯ ಎಣಿಸಿದರೆ, ಹಾಗಾಗಲು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ, ಮನುಷ್ಯ ದ್ರೋಹ ಮಾಡಿದ್ದಲ್ಲಿ, ಕರ್ಮದ ರೂಪದಲ್ಲಿ ಅದು ಅವನ ಬಳಿ ಬರುತ್ತದೆ. ಆಗ ಅವನ ಜೀವನ ನೆಮ್ಮದಿ ಹಾಳಾಗುತ್ತದೆ.

ಮಿತಿ ಮೀರಿದ ಕಾಮ: ಕಾಮ ಮಿತಿ ಮೀರಿದಾಗ, ಮನುಷ್ಯ ಸ್ವಯ ಕಳೆದುಕ“ಳ್ಳುತ್ತಾನೆ. ತಪ್ಪಾದ ಬಳಿಕ, ಪಶ್ಚಾತಾಪ ಪಡುತ್ತಾನೆ. ಬಳಿಕ ಆತನ ಜೀವನ ನರಕಕ್ಕೆ ಸಮವಾಗುತ್ತದೆ. ಹಾಗಾಗಿಯೇ ಪಂಚೇಂದ್ರಿಯಗಳನ್ನು ನಾವು ನಿಯಂತ್ರಣದಲ್ಲಿ ಇಡಬೇಕು ಅಂತಾರೆ ಹಿರಿಯರು.

ಮಿತಿ ಮೀರಿದ ಕೋಪ: ಯಾರಿಗೆ ಹೆಚ್ಚು ಕೋಪವಿರುತ್ತದೆಯೋ, ಅಂಥವರ ಜೀವನದಲ್ಲಿ ಹೆಚ್ಚು ಖುಷಿ ಇರುವುದಿಲ್ಲ. ಅವರು ಸದಾ ಕಾಲ ಜಗಳವಾಡುತ್ತಲೇ ಇರುತ್ತಾರೆ. ಅವನ ನೆಮ್ಮದಿ ಮಾತ್ರವಲ್ಲದೇ, ಅವರ ಜತೆಗಿರುವವರ ನೆಮ್ಮದಿಯೂ ಹಾಳು ಮಾಡುತ್ತಾರೆ.

=======================================================

ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

ದೇವರ ಆಶೀರ್ವಾದ ನಮ್ಮ ಮೇಲಿರಬೇಕು ಎಂದರೆ ನಾವು ಕೆಲವು ರೀತಿ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅಂದರೆ ನಾವು ಜೀವಿಸುವ ರೀತಿಯಲ್ಲೇ ಧನಾತ್ಮಕ ಬದಲಾವಣೆ ಇರಬೇಕಾಗುತ್ತದೆ. ಹಾಗಾದ್ರೆ ಆ ಬದಲಾವಣೆಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಧ್ಯಾನ, ಜಪ, ಭಜನೆ: ಧ್ಯಾನ, ಜಪ, ಭಜನೆ ಈ ಮೂರು ನಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ತರುವ ವಿಷಯವಾಗಿದೆ. ಯಾರು ಪ್ರತೀ ದಿನ ಧ್ಯಾನ ಮಾಡುತ್ತಾರೋ, ಅವರ ಏಕಾಗೃತೆ ಹೆಚ್ಚಾಗುತ್ತದೆ. ಯಾರು ಜಪ, ಭಜನೆ ಮಾಡುತ್ತಾರೋ, ಅವರ ನೆಮ್ಮದಿ ಹೆಚ್ಚುತ್ತದೆ.

ತಿಲಕವಿಡುವುದು: ನಾವು ತಿಲಕವಿಡುವುದರಿಂದ, ನಮ್ಮ ಏಕಾಗೃತೆ ಹೆಚ್ಚಾಗುತ್ತದೆ. ನಮ್ಮ ಹುಬ್ಬುಗಳ ನಡುವೆ ಇರುವ ಜಾಗವನ್ನು ಆಜ್ಞಾಚಕ್ರವೆಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ತಿಲಕವಿಡುವುದರಿಂದ ಆಕಾಗೃತೆ ಮತ್ತು ಸಕಾರಾತ್ಮಕತೆ ಹೆಚ್ಚಾಗುತ್ತದೆ.

ಸಾತ್ವಿಕ ಆಹಾರ: ಹಿಂದೂ ಧರ್ಮದಲ್ಲಿ ಸಾತ್ವಿಕ ಆಹಾರಕ್ಕೆ ಮಹತ್ವ ನೀಡಲಾಗಿದೆ. ಸಾತ್ವಿಕ ಆಹಾರ ಅಂದರೆ, ತರಕಾರಿ, ಹಣ್ಣು, ಸೊಪ್ಪು, ಕಾಳು ಇಂಥ ಆಹಾರ ಸೇವನೆ. ಅಂದರೆ, ಯಾರಿಗೂ ಉಪದ್ರ ನೀಡದೇ, ತಯಾರಾಗುವ ಆಹಾರ. ಇಂಥ ಆಹಾರ ಸೇವಿಸಿದರೆ, ದೇವರ ಆಶೀರ್ವಾದ ನಮಗೆ ಸಿಗುವುದಲ್ಲದೇ, ಆರೋಗ್ಯವೂ ಉತ್ತಮವಾಗಿರುತ್ತದೆ.

ಆಸ್ತಿಕರ ಸಂಗ: ನೀವು ಯಾರ ಜತೆ ಜೀವಿಸುತ್ತೀರೋ, ಯಾರ ಸಂಗ ಮಾಡುತ್ತೀರೋ, ಅವರಂತೆ ಆಗುತ್ತೀರಿ ಅಂತಾ ಹಿರಿಯರ ಹೇಳಿದ್ದಾರೆ. ಇದು ಸತ್ಯ ಕೂಡ. ವಾಚಾಳಿ ಸಂಗ ಮಾಡಿದರೆ, ನಿಮ್ಮ ಮಾತಿನಲ್ಲಿ ಋಣಾತ್ಮಕ ಬದಲಾವಣೆಯಾಗುತ್ತದೆ. ಸೌಮ್ಯ ಸ್ವಭಾವ, ಸ್ವಾಭಿಮಾನ, ಕೋಪಿಷ್ಟ ಹೀಗೆ ನೀವು ಯಾರ ಸಂಗ ಮಾಡುತ್ತೀರೋ, ಸ್ವಲ್ಪ ದಿನದಲ್ಲೇ ಅವರ ಹಾಗೆ ಆಡಲು ಶುರು ಮಾಡುತ್ತೀರಿ. ಹಾಗಾಗಿ ಆದಷ್ಟು ಆಸ್ತಿಕರ ಸಂಗ ಮಾಡಿ. ನಿಮಗೂ ಧ್ಯಾನ, ಭಕ್ತಿ, ಜಪತಪದಲ್ಲಿ ಆಸಕ್ತಿ ಹೆಚ್ಚುತ್ತದೆ.

==================================================================

ಸಂಜೆ ವೇಳೆ ಈ ವಸ್ತುಗಳನ್ನು ದಾನ ಮಾಡಬೇಡಿ..

ಸಂಜೆ ವೇಳೆ ನಾವು ಕೆಲವು ವಸ್ತುಗಳನ್ನು ಬೇರೆಯವರಿಗೆ ನೀಡಬಾರದು. ಹಾಗೆ ನೀಡಿದರೆ, ನಮ್ಮ ಅದೃಷ್ಟ ಅವರ ಪಾಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಸಂಜೆ ವೇಳೆ ಯಾವ ವಸ್ತುಗಳನ್ನು ನಾವು ದಾನ ಮಾಡಬಾರದು ಎಂದು ತಿಳಿಯೋಣ.

ಬಿಳಿ ಬಣ್ಣದ ವಸ್ತು: ಸಂಜೆ ವೇಳೆ ಅಥವಾ ರಾತ್ರಿ ವೇಳೆ ಬಿಳಿ ಬಣ್ಣದ ವಸ್ತುಗಳನ್ನು ನಾವು ಯಾರಿಗೂ ದಾನ ಮಾಡಬಾರದು. ಅಂದ್ರೆ, ಹಾಲು, ಮೊಸರು, ಅಕ್ಕಿ, ಉಪ್ಪು, ಸಕ್ಕರೆ ಇವೆಲ್ಲವೂ ಬಿಳಿ ಬಣ್ಣದ ವಸ್ತುಗಳು. ಇಂಥ ವಸ್ತುಗಳನ್ನು ನಾವು ಮುಸ್ಸಂಜೆ ವೇಳೆ ದಾನ ಮಾಡಬಾರದು. ಇದರ ಜತೆ ರವಾ, ಇತರೆ ಹಿಟ್ಟುಗಳನ್ನು ಸಹ ದಾನ ಮಾಡಬಾರದು.

ಹಣ: ಸಂಜೆ ವೇಳೆ ಲಕ್ಷ್ಮೀ ಮನೆಗೆ ಬರುವ ಸಮಯ. ಹಾಗಾಗಿಯೇ ಈ ವೇಳೆ ದೇವರಿಗೆ ದೀಪ ಹಚ್ಚಿ, ದೇವರ ನಾಮಸ್ಮರಣೆ ಮಾಡಲಾಗುತ್ತದೆ. ಇಂಥ ವೇಳೆ ನೀವು ಬೇರೆಯವರಿಗೆ ಹಣ ನೀಡಿದರೆ, ಅದು ಲಕ್ಷ್ಮೀ ದೇವಿಗೆ ಮಾಡಿದ ಅವಮಾನವಾಗುತ್ತದೆ. ಆದರೆ ನೀವು ಬೇರೆಯವರಿಗೆ ಸಹಾಯ ಮಾಡಲೇಬೇಕು ಅಂತಿದ್ದರೆ, ಮರುದಿನ ಬೆಳಗ್ಗಿನ ಜಾವ ಹಣ ದಾನ ಮಾಡಬಹುದು. ಆದರೆ ಮುಸ್ಸಂಜೆ ವೇಳೆ ಹಣ ದಾನ ಮಾಡುವುದು ಉತ್ತಮವಲ್ಲ.

ಅರಿಶಿನ: ಅರಿಶಿನ ಅಂದರೆ ಗುರು. ಗುರುವಿಗೆ ನೆಚ್ಚಿನ ಬಣ್ಣ ಅರಿಶಿನ ಬಣ್ಣ. ಹಾಗಾಗಿಯೇ ಗುರುವಾರದ ದಿನ ಅರಿಶಿನ ಬಣ್ಣದ ಉಡುಪು ಧರಿಸಬೇಕು ಅಂತಾ ಹೇಳೋದು. ಇಂಥ ಅರಿಶಿನವನ್ನು ನೀವು ಮುಸ್ಸಂಜೆ ವೇಳೆಗೆ ದಾನ ಮಾಡಿದರೆ, ನಿಮ್ಮ ಅದೃಷ್ಟ ಬೇರೆಯವರ ಪಾಲಾಗುತ್ತದೆ. ಅರಿಶಿನ ಪೂಜೆಯಲ್ಲಿ, ಮುತ್ತೈದೆಯರ ಬಾಳಿನಲ್ಲಿ ಪ್ರಮುಖ ಪಾತ್ರ ವಹಿಸುವ ವಸ್ತು. ಹಾಗಾಗಿ ಮುಸ್ಸಂಜೆ ವೇಳೆ ಇದನ್ನು ದಾನ ಮಾಡಬೇಡಿ.

ಕಸಬರಿಗೆ: ಕಸಬರಿಗೆ ಎಂದು ಬರೀ ಮನೆ ಸ್ವಚ್ಛ ಮಾಡುವ ವಸ್ತುವಲ್ಲ. ಬದಲಾಗಿ ಇದು ಲಕ್ಷ್ಮೀ ದೇವಿಯ ರೂಪ. ಇದನ್ನು ಯಾವ ವೇಳೆಯಲ್ಲೂ ಯಾರಿಗೂ ದಾನ ಮಾಡಬಾರದು. ಕೆಲವರು ಬಾಡಿಗೆ ಮನೆಗೆ ಬಂದಾಗ, ಅಲ್ಲಿರುವ ಕಸಬರಿಗೆಯನ್ನೇ ಬಳಸುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಆ ಕಸಬರಿಗೆಯನ್ನು ಆಚೆ ಹಾಕಿ. ನೀವು ಹ“ಸ ಕಸಬರಿಗೆ ಖರೀದಿಸಿ, ಬಳಸಬೇಕು.


=============================

ರಾತ್ರಿ ವೇಳೆ ಶವಸಂಸ್ಕಾರ ಮಾಡದಿರಲು ಕಾರಣವೇನು..?

ಹಿಂದೂ ಧರ್ಮದಲ್ಲಿ ಹಲವು ನಿಯಂಗಳು, ಪದ್ಧತಿಗಳು ಇದೆ. ಎಲ್ಲ ಧಾರ್ಮಿಕ ಕೆಲಸದಲ್ಲೂ ನಾವು ಆ ನೀತಿ ನಿಯಮವನ್ನು ಪಾಲಿಸಬೇಕು. ಹಾಗೆ ಪಾಲಿಸಬೇಕಾದ ನಿಯಮಗಳಲ್ಲಿ ಮರಣವಾದಾಗ, ಸೂರ್ಯಾಸ್ತಕ್ಕೂ ಮುನ್ನ ಶವಸಂಸ್ಕಾರ ಮಾಡುವುದು. ಹಾಗಾದ್ರೆ ಏಕೆ ಹಿಂದೂ ಧರ್ಮದಲ್ಲಿ ಸೂರ್ಯಾಸ್ತಕ್ಕೂ ಮುನ್ನ ಶವಸಂಸ್ಕಾರ ಮಾಡಲಾಗುತ್ತದೆ. ರಾತ್ರಿ ಏಕೆ ಶವಸಂಸ್ಕಾರ ಮಾಡುವುದಿಲ್ಲ ಅಂತ ತಿಳಿಯೋಣ ಬನ್ನಿ.

ಸತ್ತ ವ್ಯಕ್ತಿಗೆ ಮೋಕ್ಷ ಸಿಗಬೇಕು ಎಂದರೆ, ಅಂತ್ಯಸಂಸ್ಕಾರ ಕೂಡ ಹಗಲಿನಲ್ಲೇ ಆಗಬೇಕು. ಅದೇ ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೇ, ಸೂರ್ಯನ ಕಿರಣ ಮರಣವಾದ ವ್ಯಕ್ತಿಯ ಆತ್ಮವನ್ನು ಮೋಕ್ಷದ ಕಡೆಗೆ ಕರೆದ“ಯ್ಯುತ್ತದೆ ಅನ್ನೋ ನಂಬಿಕೆ ಇದೆ.

ರಾತ್ರಿ ವೇಳೆ ನಾಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗಿರುತ್ತದೆ. ಈ ಸಮಯವನ್ನು ಅಶುಭ ಸಮಯವೆಂದೇ ಪರಿಗಣಿಸಲಾಗುತ್ತದೆ. ಬೆಳಗ್ಗಿನ ಜಾವ ಸಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗಿರುತ್ತದೆ. ಹಾಗಾಗಿ ಸೂರ್ಯೋದಯವಿರುವಾಗಲೇ ಶವಸಂಸ್ಕಾರ ಮಾಡಬೇಕು ಎಂದು ಹೇಳುವುದು.

ಇನ್ನು ಶವಸಂಸ್ಕಾರ ಮಾಡುವಾಗ ಅಗ್ನಿಯ ಬಳಕೆ ಮಾಡುವುದರಿಂದ ಸೂರ್ಯನಿರುವ ಸಮಯದಲ್ಲಿಯೇ ಅಗ್ನಿಗೆ ಹಚ್ಚು ಶಕ್ತಿ ಇರುತ್ತದೆ. ಈ ಕಾರಣಕ್ಕೆ ಬೆಳಕಿನ ಸಮಯದಲ್ಲೇ ಶವಕ್ಕೆ ಅಗ್ನಿಸ್ಪರ್ಶ ಮಾಡಬೇಕು ಎಂದು ಹೇಳಲಾಗಿದೆ.

ಮುಖ್ಯವಾದ ವಿಚಾರ ಎಂದರೆ, ಸೂರ್ಯ ನಾರಾಯಣನ ಆಶೀರ್ವಾದವಿದ್ದರೆ, ಜೀವನ ಚೆನ್ನಾಗಿರುತ್ತದೆ ಎಂದು ಹೇಳಲಾಗಿದೆ. ಅಂದರೆ ಸೂರ್ಯನಿರುವ ಸಮಯದಲ್ಲೇ ಮದುವೆ, ಅಂತ್ಯಸಂಸ್ಕಾರವಾಗಬೇಕು. ಸೂರ್ಯನಿಲ್ಲದ ಸಮಯದಲ್ಲಿ ಯಾವುದೇ ಪ್ರಮುಖ ಧಾರ್ಮಿಕ ಕೆಲಸ ಮಾಡಿದರೆ, ಅದರಿಂದ ಫಲ ಸಿಗುವುದಿಲ್ಲವೆಂದು ಹೇಳಲಾಗಿದೆ.

ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಕಪಾಲ ಕ್ರಿಯೆ ಎಂದರೇನು..? ಇದನ್ನೇಕೆ ಮಾಡಬೇಕು..?

ಹಿಂದೂ ಧರ್ಮದಲ್ಲಿ ಜನಿಸಿದಾಗಿನಿಂದ ಸಾವಿನವರೆಗೂ ಹಲವಾರು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇದು ಬರೀ ಪದ್ಧತಿಯಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳು ಕೂಡ ಇದೆ. ಅಂಥ ಪದ್ಧತಿಗಳಲ್ಲಿ ಸಾವಿನ ಬಳಿ ಅಂತ್ಯಸಂಸ್ಕಾರ ಮಾಡುವಾಗ, ಶವ ಸುಡುವಾಗ ಕಪಾಲ ಕ್ರಿಯೆ ನಡೆಯಬೇಕು. ಹಾಗೆ ಕಪಾಲ ಕ್ರಿಯೆ ನಡೆದಾಗಲೇ, ಅಂತ್ಯಸಂಸ್ಕಾರ ಪೂರ್ಣವಾದಿತೆಂದರ್ಥ. ಹಾಗಾದ್ರೆ ಈ ಕಪಾಲ ಕ್ರಿಯೆ ಎಂದರೇನು ಅಂತಾ ತಿಳಿಯೋಣ ಬನ್ನಿ..

ಕಪಾಲ ಎಂದರೆ ಮನುಷ್ಯನ ತಲೆಬುರುಡೆ. ಶವಕ್ಕೆ ಅಗ್ನಿಸ್ಪರ್ಶ ಮಾಡಿದ ಬಳಿಕ, ಮನುಷ್ಯನ ದೇಹವು ನಾಶವಾಗುತ್ತದೆ. ಆದರೆ ತಲೆಬುರುಡೆ ಮಾತ್ರ ಹಾಗೇ ಉಳಿಯುತ್ತದೆ. ಆದರೆ ಅದನ್ನು ಹಾಗೇ ಉಳಿಯಲು ಬಿಡಬಾರದು. ಅದನ್ನು ಕೂಡ ಬೂದಿ ಮಾಡಲೇಬೇಕು. ಹಾಗೆ ತಲೆಬುರುಡೆಯನ್ನು ಬೂದಿ ಮಾಡುವ ಕ್ರಿಯೆಯೇ ಕಪಾಲ ಕ್ರಿಯೆ.

ಕಪಾಲ ಕ್ರಿಯೆ ಮಾಡದಿದ್ದಲ್ಲಿ, ಆ ಆತ್ಮಕ್ಕೆ ಸರಿಯಾಗಿ ಮುಕ್ತಿ ಸಿಗುವುದಿಲ್ಲ. ಮುಂದಿನ ಜನ್ಮದಲ್ಲಿ ಮೆದುಳಿಗೆ, ತಲೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಬರಬಹುದೆಂಬ ನಂಬಿಕೆ ಇದೆ. ಹಾಗಾಗಿ ಮನುಷ್ಯ ಸಾಯುವಾಗ ಅವನ ದೇಹದ ಎಲ್ಲ ಭಾಗ ಸರಿಯಾಗಿರಬೇಕು ಎಂದು ಹೇಳಲಾಗುತ್ತದೆ.

====

ಶುಭ ಕಾರ್ಯದಲ್ಲಿ ಅಕ್ಷತೆಯನ್ನು ಏಕೆ ಬಳಸಲಾಗುತ್ತದೆ..?
ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ ಪ್ರಾಮುಖ್ಯತೆ ಏನು..? ಯಾತಕ್ಕಾಗಿ ಅಕ್ಷತೆಯನ್ನು ಬಳಸಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ಅಕ್ಷತೆ ಅಂದ್ರೆ ಹಾಳಾಗದ ವಸ್ತು ಎಂದರ್ಥ. ಅಕ್ಕಿಯ ಹೆಸರು ಅಕ್ಷತ್. ಇದರ ಜತೆ ಕುಂಕುಮ-ಅರಿಶಿನ ಸೇರಿಸಿ, ತಯಾರಿಸುವುದೇ ಅಕ್ಷತೆ. ಅಕ್ಕಿ ವಿಶೇಷ ಮತ್ತು ಪವಿತ್ರ ಧಾನ್ಯವಾಗಿರುವ ಕಾರಣಕ್ಕೆ ಅಕ್ಕಿಯನ್ನೇ ಅಕ್ಷತೆಗೆ ಬಳಸಲಾಗುತ್ತದೆ.

ಅಕ್ಕಿ- ಅಕ್ಷತೆ ಶುಕ್ರ ಗ್ರಹದ ಜತೆ ಸಂಬಂಧವಿದೆ. ಹಾಗಾಗಿ ಯಾರ ರಾಶಿಗೆ ಶುಕ್ರ ಅಧಿಪತಿಯಾಗಿರುತ್ತಾನೋ, ಆ ರಾಶಿಯವರಿಗೆ ಆಹಾರಕ್ಕೇನೂ ಸಮಸ್ಯೆಯಾಗುವುದಿಲ್ಲ. ಅನ್ನಪೂರ್ಣಯ ಕೃಪೆ ಅವರ ಮೇಲೆ ಸದಾ ಕಾಲವಿರುತ್ತದೆ. ಅಲ್ಲದೇ, ಅನ್ನಕ್ಕಾಗಿ ಖರ್ಚು ಮಾಡಲು, ಅವರ ಬಳಿ ಸದಾ ಹಣವಿರುತ್ತದೆ.

ಅಲ್ಲದೇ ಶುಕ್ರನ ಕೃಪೆ ಯಾರ ಮೇಲಿರುತ್ತದೋ, ಅವರು ಕೂಡ ಅನ್ನಕ್ಕಾಗಿ ಪರಿತಪಿಸಬೇಕಿಲ್ಲ. ಅಂಥವರಿಗೂ ಉತ್ತಮ ಆಹಾರ ಸಿಗುತ್ತದೆ. ನಿಮಗೆ ರುಚಿಕರ ಭೋಜನ ಸವಿಯುವ ಅವಕಾಶ ಸಿಕ್ಕಿತೆಂದರೆ, ಅಲ್ಲಿ ಅನ್ನಪೂರ್ಣಯ ಜತೆ ಶುಕ್ರನ ಅನುಗ್ರಹವಿದೆ ಎಂದೇ ಅರ್ಥ.

ಅಕ್ಕಿ-ಅರಿಶಿನ-ಕುಂಕುಮ ಇದೆಲ್ಲವೂ ಶುಭಸಂಕೇತವಾಗಿದ್ದು, ಇದರ ಬಳಕೆಯಿಂದ ದೇವರ ಆಶೀರ್ವಾದದ ಜತೆಗೆ, ಮನೆಯಲ್ಲಿ ಸಕಾರಾತ್ಮಕ ವಾತಾವರಣವೂ ಇರುತ್ತದೆ. ಹಾಗಾಗಿ ಪೂಜೆಯಲ್ಲಿ ಅಕ್ಷತೆಯ ಬಳಕೆ ಮಾಡಲಾಗುತ್ತದೆ.

ೃೃೃೃೃೃೃೃೃೃೃೃೃೃೃೃೃೃೃೃೃೃೃೃೃ

ಕರ್ಪೂರ ಬಳಸಿ ಆರತಿ ಮಾಡುವುದೇಕೆ..? ಇದಕ್ಕೆ ಕಾರಣವೇನು..?

ಹಿಂದೂಗಳಲ್ಲಿ ಪೂಜೆ ಮಾಡುವಾಗ ಹಲವು ವಸ್ತುಗಳನ್ನು ಬಳಸಲಾಗುತ್ತದೆ. ತೆಂಗಿನಕಾಯಿ, ಕುಂಕುಮ-ಅರಿಶಿನ, ಎಲೆ ಅಡಿಕೆ, ಬಾಳೆಹಣ್ಣು ಇತ್ಯಾದಿ ವಸ್ತುಗಳನ್ನು ಬಳಸಲಾಗುತ್ತದೆ. ಅದೇ ರೀತಿ ಕರ್ಪೂರ ಬಳಸಿ ಆರತಿ ಮಾಡಲಾಗುತ್ತದೆ. ಹಾಗಾದ್ರೆ ದೇವರಿಗೆ ಕರ್ಪೂರ ಬಳಸಿ ಆರತಿ ಮಾಡೋದಾದ್ರೂ ಯಾಕೆ ಅಂತಾ ತಿಳಿಯೋಣ ಬನ್ನಿ..

ಪೂಜೆ ಮಾಡುವಾಗ ಕರ್ಪೂರವನ್ನು ಬಳಸಿ ಆರತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೇ ಪಿತೃ ದೋಷ, ಗ್ರಹ ದೋಷಗಳ ಪರಿಣಾಮ ಕಡಿಮೆಯಾಗುತ್ತದೆ.

ಇನ್ನು ಇದಕ್ಕಿರುವ ವೈಜ್ಞಾನಿಕ ಕಾರಣವೇನೆಂದರೆ, ಮನೆಯಲ್ಲಿ ಕರ್ಪೂರ ಬಳಸಿ ಆರತಿ ಮಾಡುವುದರಿಂದ ಪರಿಸರ ಶುದ್ಧವಾಗುತ್ತದೆ. ಉಸಿರಾಡಲು ಉಪದ್ರಿಸುವ ಸೂಕ್ಷ್ಮ ಜೀವಿಗಳು, ಕ್ರಿಮಿ-ಕೀಟಗಳ ಓಡಾಟ ಕಡಿಮೆಯಾಗುತ್ತದೆ.

====

ಶ್ರೀಮಂತಿಕೆ ಬಂದಾಗ ಈ ವಿಷಯಗಳನ್ನು ಮರಿಯಬೇಡಿ..

ಕೆಲವರು ಬಡತನದಲ್ಲಷ್ಟೇ ನಿಯತ್ತಾಗಿರುತ್ತಾರೆ. ಶ್ರೀಮಂತಿಕೆ ಬಂದಾಗ, ಇತರರು ಮಾಡಿದ ಸಹಾಯ ಅವರಿಗೆ ಮರೆತು ಹೋಗುತ್ತದೆ. ಅದೇ ರೀತಿ, ಬಡತನವಿದ್ದಾಗ, ದೇವರಲ್ಲಿದ್ದ ನಂಬಿಕೆ, ಭಕ್ತಿ, ಎಲ್ಲವೂ ಕರಗುತ್ತ ಬರುತ್ತದೆ. ಹಾಗಾಗಿ ಚಾಣಕ್ಯರು ಶ್ರೀಮಂತಿಕೆ ಬಂದರೂ ಕೆಲ ವಿಷಯಗಳನ್ನು ಮರಿಯಬಾರದು ಅಂತಾ ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ವಿಷಯಗಳು ಅಂತಾ ತಿಳಿಯೋಣ ಬನ್ನಿ..

ಹಣ ಗಳಿಸುವುದಷ್ಟೇ ಅಲ್ಲ, ಉಳಿಸುವುದನ್ನೂ ಕಲಿಯಿರಿ. ನೀವು ಕಷ್ಟಪಟ್ಟು ದುಡಿದಿದ್ದರಿಂದಲೇ, ನಿಮಗೆ ದುಡ್ಡು ಬಂದಿರುತ್ತದೆ. ಶ್ರೀಮಂತಿಕೆ ಬಂದಿರುತ್ತದೆ. ಹಾಗಾಗಿ ಹೇಗೆ ಕಷ್ಟಪಟ್ಟು ದುಡಿದು ದುಡ್ಡು ಮಾಡಿರುತ್ತೀರೋ, ಅಂತೆಯೇ ಜಾಣ್ಮೆಯಿಂದ ಅದನ್ನು ಕೂಡಿಡುವುದನ್ನೂ ಕಲಿಯಿರಿ. ಯಾಕಂದ್ರೆ ಈ ಪ್ರಪಂಚದಲ್ಲಿ ಎಷ್ಟೇ ಶ್ರೀಮಂತರಿದ್ದರೂ ಕೂಡ, ಅವರು ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದಿಲ್ಲ. ಕೊಂಚ ಹಣ ಕೂಡಿಡುತ್ತಾರೆ. ಯಾಕಂದ್ರೆ ಎಷ್ಟೇ ಹಣವಿದ್ರೂ, ಕಷ್ಟಕಾಲ ಬಂದಾಗ, ಹಣ ಖರ್ಚಾಗಬಹುದು. ಹಾಗೆ ಖರ್ಚಾದ ಬಳಿಕ, ನಮ್ಮ ಬಳಿ ಇನ್ನೂ ದುಡ್ಡಿರಬೇಕು. ಇಲ್ಲವಾದಲ್ಲಿ ಕಷ್ಟವಾಗುತ್ತದೆ ಅನ್ನೋ ಮುಂದಾಲೋಚನೆ ಇರುವುದರಿಂದ ಎಷ್ಟೇ ಶ್ರೀಮಂತರಿದ್ದರೂ, ಹಣ ಕೂಡಿಡುವ ಬುದ್ಧಿವಂತಿಕೆ ನಮ್ಮಲ್ಲಿರಬೇಕು.

ಅಗತ್ಯಕ್ಕೆ ತಕ್ಕಷ್ಟೇ ಖರ್ಚು ಮಾಡಿ. ನೀವು ಕಷ್ಟಪಟ್ಟು ದುಡಿದ ಹಣವನ್ನು ನಿಮ್ಮ ಪತ್ನಿ ಮಕ್ಕಳು ಭರ್ಜರಿಯಾಗಿ ಖರ್ಚು ಮಾಡಬಹುದು. ಯಾಕಂದ್ರೆ ಅವರಿಗೆ ದುಡಿಮೆಯ ಕಷ್ಟ ಗೊತ್ತಿರುವುದಿಲ್ಲ. ಹಾಗಾಗಿ ನಿಮ್ಮ ಮಕ್ಕಳಿಗಾದರೂ ನೀವು ಚಿಕ್ಕಂದಿನಿಂದಲೇ, ದುಡಿಮೆಯ ಬೆಲೆ ಕಲಿಸಬೇಕು. ದುಡ್ಡನ್ನು ಅವಶ್ಯಕತೆ ಇದ್ದರಷ್ಟೇ ಖರ್ಚು ಮಾಡಬೇಕು ಎಂದು ಹೇಳಿ ಕೊಡಿ. ಅಲ್ಲದೇ, ಮನೆಯಲ್ಲಿ ಯಾರೇ ಹೀಗೆ ಸುಮ್ಮ ಸುಮ್ಮನೆ ಹಣ ಖರ್ಚು ಮಾಡಿದ್ರೆ, ಅವರಿಗೆ ಬೈದಾದರೂ ಸರಿ, ದುಡ್ಡಿನ ಬೆಲೆ ತಿಳಿಸಿ. ಇಲ್ಲವಾದಲ್ಲಿ ನೀವು ದುಡಿದ ಹಾಗೆ, ಹಣ ನೀರಿನಂತೆ ಖರ್ಚಾಗುತ್ತದೆ. ಮತ್ತು ನಿಮಗೆ ಹಣ ಉಳಿಸಲು ಸಾಧ್ಯವಾಗುವುದಿಲ್ಲ.

ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗಬೇಕೆಂದರೆ ಹೀಗೆ ಮಾಡಿ..

ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಬೇಕು. ಅವರು ಮನೆಯಲ್ಲಿ ಹಿರಿಯರು ಹೇಳಿದ ಮಾತುಗಳನ್ನು ಕೇಳಬೇಕು. ಒಳ್ಳೆ ಹೆಸರು ಮಾಡಬೇಕು ಅಂತಾ ಎಲ್ಲ ತಂದೆ ತಾಯಂದಿರಿಗೂ ಆಸೆ ಇರತ್ತೆ. ಹಾಗಾದ್ರೆ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ವಿವರಣೆ ನೀಡಲಿದ್ದೇವೆ..

ತಂದೆ ತಾಯಿಯರಲ್ಲಿ 4 ರೀತಿಯ ಜನರಿರುತ್ತಾರೆ. ಈ 4 ಜನರ ಆಲೋಚನೆ ಬೇರೆ ಬೇರೆ ಇರತ್ತೆ. ಉದಾಹರಣೆಗೆ ಒಂದು ಮಗು ತನ್ನ ತಂದೆ ತಾಯಿ ಜೊತೆ ಮಾರುಕಟ್ಟೆಗೆ ಹೋದಾಗ, ನನಗೆ ಆ ಆಟಿಕೆ ಬೇಕು ಎಂದು ಕೇಳತ್ತೆ. ಅದಕ್ಕೆ ಅವರು, ಬೇಡಾ ಅದೆಲ್ಲಾ ತೆಗೆದುಕೊಳ್ಳಬೇಡಾ ಎನ್ನುತ್ತಾರೆ. ಆದ್ರೆ ಆ ಮಗು ನನಗೆ ಆ ಆಟಿಕೆ ಬೇಕೆ ಬೇಕು ಎನ್ನುತ್ತೆ. ಆಗ ಆ ತಂದೆ ತಾಯಿ ಬೇಡಾ ಅಂದ್ರೆ ಕೇಳಲ್ವಾ..? ಹಠ ಮಾಡಿದ್ರೆ ಪೆಟ್ಟು ಬೀಳತ್ತೆ ಎಂದು ಹೇಳುತ್ತಾರೆ. ಇವರು ಮೊದಲನೇಯ ಕೆಟಗರಿ ತಂದೆ ತಾಯಿ.

ಇನ್ನು ಎರಡನೇ ಕೆಟಗರಿಯ ತಂದೆ ತಾಯಿ, ಹಾ ಸರಿ ತಗೋ ಎನ್ನುತ್ತಾರೆ. ಆ ಮಗು ಇನ್ನೊಂದು ಆಟಿಕೆ ತೆಗೆದುಕೊಳ್ಳುತ್ತೇನೆ ಎಂದರೆ, ಸರಿ ಅದನ್ನೂ ತಗೋ ಎನ್ನುತ್ತಾರೆ. ಮೂರನೇಯ ಕೆಟಗರಿ ತಂದೆ ತಾಯಿ, ಮಗು ಏನು ಕೇಳುತ್ತಿದೆ ಅಂತಾನೂ ನೋಡುವುದಿಲ್ಲ. ಅದರ ಬೇಕು ಬೇಡಗಳ ಬಗ್ಗೆ ಯೋಚಿಸುವುದಿಲ್ಲ. ಯಾಕಂದ್ರೆ ಅವರು ತಮ್ಮದೇ ಲೋಕದಲ್ಲಿ ಕಳೆದು ಹೋಗಿರ್ತಾರೆ.

ನಾಲ್ಕನೇ ಕೆಟಗರಿ ತಂದೆ ತಾಯಿ, ನಿನ್ನ ಬಳಿ ಆಗಲೇ ಸುಮಾರು ಆಟಿಕೆಗಳಿದೆ. ಈ ಆಟಿಕೆ ತೆಗೆದುಕೊಂಡು ಏನು ಮಾಡುತ್ತೀ ಎಂದು ಕೇಳುತ್ತಾರೆ.  ಅದಕ್ಕೆ ಆ ಮಗು, ಆದರೆ ನನಗೆ ಈ ಆಟಿಕೆ ಇಷ್ಟವಾಯಿತು ಎನ್ನುತ್ತದೆ. ಆಗ ಆ ತಂದೆ ತಾಯಿ, ನಿನಗೆ  ಎಲ್ಲವೂ ಇಷ್ಟವಾಗಬಹುದು. ಹಾಗಂತ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ. ಇರುವ ಆಟಿಕೆ ಮುಗಿದ ಮೇಲೆ, ಮತ್ತೆ ಬೇರೆ ಆಟಿಕೆ ತೆಗೆದುಕೊಳ್ಳೋಣ. ಅಲ್ಲಿಯವರೆಗೂ ಸುಮ್ಮನಿರು ಎಂದು ಹೇಳುತ್ತಾರೆ.

ಈ 4 ಕೆಟಗರಿಗಳಲ್ಲಿ 4ನೇ ಕೆಟಗರಿ ತಂದೆ ತಾಯಿಯ ಮಕ್ಕಳು ಸಂಸ್ಕಾರವಂತರು, ಉತ್ತಮರು ಆಗುತ್ತಾರೆ. ಯಾಕಂದ್ರೆ, ಈ ತಂದೆ ತಾಯಿ ಆ ಮಕ್ಕಳಿಗೆ ಬೈಯ್ಯುವುದಿಲ್ಲ. ಬದಲಾಗಿ ಸಮಾಧಾನವಾಗಿ ಬುದ್ಧಿ ಹೇಳುತ್ತಾರೆ. ಖರ್ಚಿನ ಮಹತ್ವ ಹೇಳಿಕೊಡುತ್ತಾರೆ. ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸುತ್ತಾರೆ. ಹಾಗಂತ ಹೆಚ್ಚು ಸಲುಗೆ ಕೊಡುವುದಿಲ್ಲ.

ಅಂಥವರ ಮಕ್ಕಳು ಅಪ್ಪ ಅಮ್ಮನ ನಂಬಿಕೆ ಗಳಿಸುತ್ತಾರೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಅಪ್ಪಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಾಕಂದ್ರೆ ಅವರಿಗೆ ಒಳ್ಳೆಯದ್ದು ಯಾವುದು..? ಕೆಟ್ಟದ್ದು ಯಾವುದು ಎಂದು ಗೊತ್ತಿರುತ್ತದೆ. ಹಾಗಾಗಿ ನಿಮ್ಮ ಮಕ್ಕಳು ಏನಾದರೂ ಕೇಳಿದಾಗ, ತಪ್ಪು ಮಾಡಿದಾಗ, ಅವರಿಗೆ ಸರಿಯಾದ ರೀತಿಯಲ್ಲೇ ಬುದ್ಧಿ ಹೇಳಿ.

ಅವರಿಗೆ ಪದೇ ಪದೇ ಬೈಯ್ಯುವುದನ್ನ ಮಾಡಬೇಡಿ. ಅವರು ಹೇಳಿದ್ದೆಲ್ಲಾ, ಮಾಡಿದ್ದೆಲ್ಲಾ ಸರಿ ಎಂದು ಹೇಳಬೇಡಿ. ಮಕ್ಕಳು ಹೇಗೋ ಬೆಳೆಯುತ್ತಾರೆಂದು ಬಿಡಬೇಡಿ. ಅಪ್ಪ ಅಮ್ಮ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಬೆಳೆಸಿದಾಗಲೇ, ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯುತ್ತಾರೆ.

Tags: Beauty tipsbjpCM SiddaramaiahCongressHealth TipsInternational NewsJDSKannada NewsKannada StoriesKarnataka NewsKTVNational NewsPM ModiPolitical NewsRahul Gandhishri NewsSpecial StoriesSpecial StorySports NewsState Newsಆಹಾರಊಟಕೂದಲ ಆರೋಗ್ಯಕೂದಲು ಉದುರುವಿಕೆಕೇಶರಾಶಿಜ್ಯೋತಿಷ್ಯತಿಂಡಿತ್ವಚೆಯ ಆರೋಗ್ಯ.ಧರ್ಮಪೂಜೆಸೌಂದರ್ಯ ಸಲಹೆ
ShareSendTweetShare
Join us on:

Related Posts

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

Spiritual: ಈ 4 ಜನರ ಅಂತ್ಯಸಂಸ್ಕಾರವನ್ನು ಕಾಶಿಯಲ್ಲಿ ಮಾಡಲಾಗುವುದಿಲ್ಲ… ಯಾಕೆ?

Spiritual: ಈ 4 ಜನರ ಅಂತ್ಯಸಂಸ್ಕಾರವನ್ನು ಕಾಶಿಯಲ್ಲಿ ಮಾಡಲಾಗುವುದಿಲ್ಲ… ಯಾಕೆ?

Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು

Horoscope: ನಾಯಕತ್ವದ ಗುಣ, ಶಿಕ್ಷಕರಾಗುವ ಅರ್ಹತೆ, ಅದೃಷ್ಟವಂತ ಪತ್ನಿಯಾಗುವ ರಾಶಿಯವರು ಇವರು

Horoscope: ಆಕರ್ಷಕ ವ್ಯಕ್ತಿತ್ವ ಹೊಂದಿರುವ ರಾಶಿಯವರು ಇವರು

Horoscope: ದೇವರ ದಯೆ ಇರುವ, ತಾಳ್ಮೆ, ನಾಯಕತ್ವದ ಗುಣ, ಆಕರ್ಷಕ ವ್ಯಕ್ತಿತ್ವವುಳ್ಳ ರಾಶಿಯವರು ಇವರು

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Spiritual: ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

Health Tips: ಊಟದ ಬಳಿಕ ನೀವು ಮಾಡುವ ಈ ತಪ್ಪುಗಳೇ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ

Health Tips: ಊಟದ ಬಳಿಕ ನೀವು ಮಾಡುವ ಈ ತಪ್ಪುಗಳೇ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In