ಕಾನ್ಪುರ: ಪ್ರಾಣಿಗಳು ಅನೇಕ ಪೀಕಲಾಟವನ್ನು ತಂದಿಡುತ್ತವೆ. ಇಂಥದ್ದೇ ವಿಲಕ್ಷಣ ಘಟನೆ ಒಂದು ಉತ್ತರ ಪ್ರದೇಶದ ಕಾನ್ಪುರದ ಚೌಬೇಪುರ್ದಲ್ಲಿ ಕಳೆದ ಬುಧವಾರ ವರದಿಯಾಗಿದೆ. ಇಲ್ಲಿನ ಬ್ಲಾಕ್ ಡೆವಲಪ್ಮೆಂಟ್ ಕಚೇರಿಗೆ ನುಗ್ಗಿದ ಮೇಕೆ, ಕಡತವೊಂದನ್ನು ತಿನ್ನುವ ಸೊಪ್ಪೆಂದು ಭಾವಿಸಿ ಹೊತ್ತೊಯಿತು. ಇದನ್ನು ಕಂಡ ನೌಕರರೊಬ್ಬರು ಮೇಕೆ ಹಿಂದೆ ದೌಡಯಿಸಿದರು. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಚೌಬೇಪುರ್ದ ಪಂಚಾಯಿತಿ ಕಾರ್ಯದರ್ಶಿ ಕಚೇರಿಗೆ ಬೆಳಂಬೆಳ್ಳಿಗೆಯ ಲಗ್ಗೆ ಇಟ್ಟ ಕಪ್ಪು ಬಣ್ಣ ಮೇಕೆ, ಯಾರೂ ಇಲ್ಲದ ಕೋಣೆಯೊಳಗೆ ನುಗ್ಗಿ ಬಾಯಿಗೆ ಸಿಕ್ಕ ಟೇಬಲ್ ಮೇಲಿಟ್ಟಿದ ಕಡತವೊಂದನ್ನು ಕಚ್ಚಿಕೊಂಡು ಹೊರಟೇ ಬಿಟ್ಟಿತು. ಇದನ್ನು ಇನ್ನೊಂದು ಕೋಣೆಯಲ್ಲಿದ್ದ ನೌಕರ ನೋಡಿ, ಅದರ ಹಿಂದೆ ಓಡತೊಡಗಿದರು. ಈ ಸಿನಿಮೀಯ ದೃಶ್ಯವನ್ನು ಯಾರೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದಾರೆ. ಈ ವಿಡಿಯೋ 22 ಸೆಕೆಂಡ್ ಇದ್ದು, “ಅರೆ ಯಾರ್ ದೇ ದೆ, ಲೇ ಗಯಿ ಲೇ ಗಯಿ” ಎಂದು ನೌಕರ ಕೂಗುತ್ತಿರುವ ಧ್ವನಿ ವಿಡಿಯೋದಲ್ಲಿ ಇದೆ.
ಆಡನ್ನು ಅಟ್ಟಿಸಿಕೊಂಡ ಬಂದ ನೌಕರ ಕಡೆಗೂ ಅದರ ಬಾಯಲ್ಲಿದ್ದ ಫೈಲ್ ಅನ್ನು ಕಿತ್ತುಕೊಂಡರು. ಆದರೆ, ಕಡತದ ಕೆಲವು ಭಾಗಕ್ಕೆ ಹಾನಿಯಾಗಿದೆ. ಬಹುಶ ಅದು ಕೆಲವು ಹಾಳೆಗಳನ್ನು ತಿಂದುಬಿಟ್ಟಿದೆ. ಹರಿದಿದ್ದ ಪುಟಗಳನ್ನು ನೌಕರ ಅಂಟಿಸಿದ್ದಾರೆ.
ಇಷ್ಟಾದರೂ ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ ಆಡು ಕಚ್ಚಿಕೊಂಡು ಹೋಗಿದ್ದು ಫೈಲ್ ಅಲ್ಲ, ಕ್ಯಾಂಟೀನ್ನಲ್ಲಿದ್ದ ರದ್ದಿ ಕಾಗದ ಎಂದು ತಮ್ಮ ಬೇಜವಾಬ್ದಾರಿಯನ್ನ ಆಡಿನ ಮೇಲೆ ಹೊರೆಸುವ ಮಾತನಾಡಿದ್ದಾರೆ.
“ಆಡು ಕಚ್ಚಿಕೊಂಡು ಓಡಿಹೋಯಿಗಿದ್ದು, ಬೇಡದ ಕಾಗದ, ಅಧಿಕೃತ ಕಡತವಲ್ಲ’ ಎಂದು ಅಧಿಕಾರಿ ಮನ್ನು ಲಲ್ ಯಾದವ್ ಹೇಳಿದ್ದಾರೆ ‘ನಮ್ಮ ನೌಕರರೊಬ್ಬ ಅದರ ಬೆನ್ನು ಹಿಂದೆ ಬಿದ್ದು, ಅದನ್ನು ವಾಪಸು ತಂದಿದ್ದಾರೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲು ನೌಕರನಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಈ ವಿಡಿಯೋ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದು, “ಆಡು ಸತ್ಯವನ್ನು ಜೀಣರ್ಣೀಸಿಕೊಳ್ಳುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ. “ಸರ್ಕಾರಿ ಉದ್ಯೋಗಿಗಳ ನಿಷ್ಕಾಳಜಿಗೆ ಸಾರ್ವಜನಿಕರು ಬೆಲೆ ತೆರೆಬೇಕು’ ಎಂದು ಮೊತ್ತೊಬ್ಬರು ಟೀಕಿಸಿದ್ದಾರೆ.
Govt Employee Runs After Goat As It Flees With Office File
ಇದನ್ನು ಓದಿ: ಮಗುವಿನ ಲಿಂಗ ಬಹಿರಂಗಪಡಿಸಲು ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಂಡ ದಂಪತಿ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಇದನ್ನೂ ಓದಿ: ಒಬ್ಬಂಟಿ ನಾಯಿಗೆ ಬೇಜಾರಾದರೆ ಏನು ಮಾಡುತ್ತೆ? ಫೋನ್ ಬಳಸಿ ಮಾಲೀಕರಿಗೆ ಕರೆ ಮಾಡುತ್ತೆ!
Discussion about this post