ಶುಭಂ ಗುಪ್ತಾ ಎದೆಗುಂದದ ಛಲಗಾರ. ಹುಟ್ಟಿದ್ದು ರಾಜಸ್ಥಾನದ ಜೈಪುರಿನಲ್ಲಿ, ಇವರ ತಂದೆ ಕುಡುಂಬದೊಂದಿಗೆ ಮಹಾರಾಷ್ಟ್ರದ ಹಳ್ಳಿಯೊಂದಕ್ಕೆ ವಲಸೆ ಬರುತ್ತಾರೆ.
ಹಿಂದಿ ಮತ್ತು ಇಂಗ್ಲಿಷ್ ಓದಲು ವಾಪಿ ಎಂಬಲ್ಲಿಯ ಶಾಲೆಯೊಂದಕ್ಕೆ ಪ್ರವೇಶ ಪಡೆದರು. ಶುಭಂಗೆ ಅದು ಬಹಳ ದೂರವಿದ್ದು ಸಮಸ್ಯೆ ಎದುರಾಗುತ್ತದೆ. ಈ ಶಾಲೆ ಮನೆಯಿಂದ ಬಹು ದೂರ. ನಿತ್ಯ ಟ್ರೈನ್ ನಲ್ಲಿ ಪ್ರಯಾಣ. ಸಹೋದರಿ ಜೊತೆ ಮುಂಜಾನೆ 6 ಗಂಟೆಯಿಂದ ಮನೆಯಿಂದ ಹೊರಟರೆ ಸಾಯಂಕಾಲ ವಾಪಸ್ ಬರುತ್ತಿದ್ದರು.
ತಂದೆಯ ಚಪ್ಪಲಿ ಅಂಗಡಿಯಲ್ಲಿ ಕೆಲಸ
ಶುಭಂ 8 ರಿಂದ 12ನೇ ತರಗತಿ ವರೆಗೆ ವಿಪಾ ಶಾಲೆಯಲ್ಲಿ ಓದುತ್ತಾನೆ. ಇದೇ ವೇಳೆ ಚಪ್ಪಲಿ ಅಂಗಡಿಯನ್ನು ತೆರೆದು, ತಂದೆ ಹೊಸ ಬ್ಯುಸಿನೆಸ್ ಶುರು ಮಾಡುತ್ತಾರೆ. ಮಹಾರಾಷ್ಟ್ರದ ಧನು ರಸ್ತೆಯಲ್ಲಿ ಪುಟ್ಟ ‘ಶೂ’ ಅಂಗಡಿಯಲ್ಲಿ ಕೆಲಸ ಮಾಡೋದು,ಉಳಿದ ಸಮಯ ಓದುವುದು. ಆಗಲೇ ಐಎಎಸ್ (IAS) ಅಧಿಕಾರಿಯಾಗುವ ಕನಸು ಕಾಣುತ್ತಿದ್ದ.
ದೆಹಲಿಗೆ ಪಯಣ ;
ಪಿಯುಸಿ ನಂತರ ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸಿದ ಶುಭಂ, ಅಲ್ಲಿಯೇ ಬಿ.ಕಾಂ ಹಾಗೂ ಎಮ್ ಕಾಂ ಪದವಿ ಪಡೆಯುತ್ತಾನೆ. ಇದಾದ ನಂತರ 2015 ರಲ್ಲಿ ಯುಪಿಎಸ್ಸಿ (UPSC) ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾನೆ.
ನಾಲ್ಕನೇ ಬಾರಿ ವಿಜಯ ಗಳಿಸಿ ಆರನೇ Rank :
ಮೊದಲ ಪ್ರಯತ್ನದಲ್ಲಿ ವಿಫಲಗೊಳ್ಳುವ ಇವರು 2016 ರಲ್ಲಿ ಎರಡನೇ ಭಾರಿ ಯುಪಿಎಸ್ಸಿ ಪರೀಕ್ಷೆ ಬರೆದು 366 Rank ಪಡೆದು ಪಾಸ್ ಆಗುತ್ತಾರೆ. ಇದರ ಫಲವಾಗಿ ಭಾರತೀಯ ಅಡಿಟ್ ಹಾಗೂ ಅಕೌಂಟ್ ಇಲಾಖೆಯಲ್ಲಿ ನೇಮಕಗೊಳ್ಳುತ್ತಾರೆ.
ಮತ್ತೆ ಮತ್ತೆ ಪರೀಕ್ಷೆಗೆ ಸಜ್ಜಾಗುತ್ತಾರೆ. ಆದರೆ, ಮೂರನೇ ಪ್ರಯತ್ನದಲ್ಲಿ ಪ್ರಿಲಿಮ್ಸ್ ಕೂಡ ಪಾಸಾಗುವುದಿಲ್ಲ. ಇದರಿಂದ ಎದೆಗುಂದದ ಅವರು 2018 ರಲ್ಲಿ ನಾಲ್ಕನೇ ಬಾರಿ ಪರೀಕ್ಷೆ ಬರೆಯುತ್ತಾರೆ. 6 ನೇ Rank ಪಡೆದು ಪಾಸಾದ ಶುಭಂ ತರಬೇತಿ ಮುಗಿಸಿಕೊಂಡು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮರಳಿ ಯತ್ನವ ಮಾಡು
ಸುಲಭವಾಗಿ ಯಾವುದೇ ಕೆಲಸ ಸಾಧನೆಯಾಗದು,ಮರಳಿ ಯತ್ನವ ಮಾಡೋದು ಸಹ ಎಲ್ಲರಿಗೂ ಒಂದು ಹೊಸ ತಿರುವು ಸೃಷ್ಟಿ ಮಾಡಬಹುದು ಎಂಬುದಕ್ಕೆ ಶುಭಂ ಕತೆ ಒಂದೊಳ್ಳೆ ಉದಾಹರಣೆಯಾಗಿದೆ.

























Discussion about this post