ಬೆಂಗಳೂರು: ಕನ್ನಡ ಕಿರುತೆರೆ ವಾಹಿನಿಯ ನಟಿ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
೨೫ ವರ್ಷ ವಯಸ್ಸಿನ ಸೌಜನ್ಯ ತನ್ನ ತಾಯಿಯ ಕುರಿತು ಕ್ಷಮೆ ಯಾಚಿಸಿ ಡೆತ್ ನೋಟ್ ಬರೆದಿದ್ದು, ಅಮ್ಮ ನನ್ನನ್ನು ಕ್ಷಮಿಸಿ, ಅನಾರೋಗ್ಯದ ಸ್ಥಿತಿ ಬಹಳವಾಗಿ ಕಾಡುತ್ತಿರುವುದರಿಂದ ತಮಗೆ ಇಷ್ಟವಿರಲಿಲ್ಲದಿದ್ದರೂ ಈ ರೀತಿ ಮಾಡುತ್ತಿರುವೆ ಎಂದಿದ್ದಾರೆ.
ಸ್ನೇಹಿತರು, ಸಹೋದರರಿಗೂ ಸಹ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ.
ಮೂಲತಃ ಕೊಡಗಿನ ಕುಶಾಲನಗರದವರಾಗಿದ್ದು ಕನ್ನಡ ಸಿನೆಮಾಗಳಾದ ಫನ್ , ಚೌಕಟ್ಟು ಗಳಲ್ಲಿ ಸಹ ನಟಿಸಿದ್ದರು.
ಆದ್ರೆ ಪೊಲೀಸರು ಇದು ಕೊಲೆ ಇರಬಹುದಾ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ.
ಮೂರು ಭಾಷೆಯಲ್ಲಿ ಮಿಕ್ಸ್ ಆಗಿ ಬರೆದಿರುವ ವಿವಿಧ ಡೆತ್ ನೋಟ್ ಗಳು ಅಹ ಅನುಮಾನ ಹುಟ್ಟುಹಾಕಿದ್ದು ತನಿಖೆ ನಡೆಯುತ್ತಿದೆ.

























Discussion about this post