ಕರೋನಾ ಮೂರನೇ ಅಲೆ ಪ್ರಾರಂಭವಾಗಿದೆ ಎಂಬ ಮುನ್ಸೂಚನೆ ನಡುವೆಯೇ ಬೆಂಗಳೂರಿನಲ್ಲಿ ಮಕ್ಕಳ ಮೇಲ ಕರೋನಾ ಮಾರಿ ಉಪಟಳ ಶುರುವಾಗಿದೆ. ಕೇವಲ ಹತ್ತು ದಿನಗಳಲ್ಲಿ ೦-೯ ವಯಸ್ಸಿನ ೧೯೪ ಮಕ್ಕಳು ಹಾಗೂ ೧೦-೧೯ ವಯಸ್ಸಿನ ೩೦೫ ಮಕ್ಕಳಲ್ಲಿ ಒರೋನ ಸೋಂಕು ಪಾಸಿಟಿವ್ ಬಂದಿದೆ.
ರಾಜಧಾನಿಯಲ್ಲಿ ಒಟ್ಟು ೧೫,೯೧೯ ಮಂದಿ ಈಗಾಗಲೇ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದೇ ಅಂಕಿಅಂಶಗಳಗಳಲ್ಲಿ ಒಂಬತ್ತು ವರ್ಷಗಳೊಳಗಿನ ೧೯ ಮಕ್ಕಳ, ೧೦-೧೯ ವರ್ಷದೊಳಗಿನ ೨೬ ಮಕ್ಕಳು ಸೇರಿದ್ದಾರೆ.ಅಲ್ಲದೆ ೨೦-೩೦ ವರ್ಷಗಳ ೨೭೯ ಮಂದಿ ಸೇರಿದ್ದರು.
ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಜಾಗರೂಕತೆ ವಹಿಸುವುದು ಜರೂರಿ ಕಾರ್ಯವಾಗಿದೆ. ಮಂಗಳೂರು ಸೇರಿದಂತೆ ಬೆಂಗಳೂರಿನಲ್ಲಿ ಕೊರೊನಾ ಸೊಂಕು ಹೆಚ್ಚುತ್ತಲೇ ಇದೆ. ರಾಜ್ಯ ಸರ್ಕಾರ ಇದೇ ತಿಂಗಳ ಕೊನೆಯ ವಾರದಲ್ಲಿ ಶಾಲೆ ತೆರೆಯಲು ನಿರ್ದಾರ ಕೈಗೊಂಡಿರುವುದರಿಂದ ಪಾಲಕರರಲ್ಲಿ ಆತಂಕ ಮನೆಮಾಡಿದೆ.
Discussion about this post