ಗೋಕಾಕ್: ಗೃಹಸಚಿವರು ಅತ್ಯಾಚಾರ ಪ್ರಕರಣದ ಬಗ್ಗೆ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಖಂಡಿಸಿದ್ದಾರೆ.
ಗೃಹಸಚಿವರ ಬಾಯಿಂದ ಈ ಮಾತು ಬರಬಾರದಿತ್ತು, ಸಚಿವರು ಅವರ ಸಾಮರ್ಥ್ಯದ ಬಗ್ಗೆ ಅವರೇ ಸವಾಲು ಎತ್ತಿದ್ದಾರೆ ಎಂದವರು ಹೇಳಿದ್ದಾರೆ. ಇದೇ ವೇಳೆ ಮೈಸೂರು ಭಾಗದ ಜನರಲ್ಲಿ ಈ ಪ್ರಕರಣದಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಆದಷ್ಟು ಬೇಗ ತನಿಖೆ ನಡೆಸಿ, ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ತಿಳಿಸಿದ್ದಾರೆ.
ಪತ್ರಕರ್ತರ ಪ್ರಶ್ನೆಯೊಂದಿಗೆ ಉತ್ತರಿಸಿದ ಅವರು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ವೇಳೆ ಎಲ್ಲಾ ಸಮುದಾಯದ ಅಭ್ಯರ್ಥಿಗಳಿಗೂ ಟಿಕೆಟ್ ನೀಡಿದ್ದೇವೆ. ಇದಕ್ಕೆ ಮೊದಲು ಪಕ್ಷ ಮತ್ತು ಸ್ಥಳೀಯ ಮುಖಂಡರುಗಳೊಡನೆ ಚರ್ಚೆ ನಡೆಸಿದ್ವಿ, ಆಯಾ ವಾರ್ಡ್ ನಲ್ಲಿ ಹೆಚ್ಚು ಓಟ್ ಇರೋ ಸಮುದಾಯದವರ ಅಭರ್ಥಿಗೆ ಟಿಕೆಟ್ ನೀಡಿದ್ದೇವೆ ಎಂದಿದ್ದಾರೆ.

























Discussion about this post