ಚಿಕ್ಕಮಗಳೂರು: ಕೋವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 21 ಮಂದಿ ಗು ಣಮುಖರಾಗಿದ್ದು, ಸೋಮವಾರ ಜಿಲ್ಲೆಯ 16 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚಿಕ್ಕಮಗಳೂರು ತಾಲ್ಲೂಕಿನ ೬, ಕಡೂರಿನ ಇಬ್ಬರು, ತರೀಕೆರೆಯ ಓರ್ವ, ಮೂಡಿಗೆರೆ ಯ ಇಬ್ಬರು, ಕೊಪ್ಪದ ಓರ್ವ ಹಾಗೂ ಶೃಂಗೇರಿಯ ೪ಮಂದಿಯಲ್ಲಿ ಸೋಂಕು ಕಾಣಿಸಿ ಕೊಂಡಿದೆ. ೧೫ಮಂದಿಯನ್ನು ಹೋಮ್ ಐಸೋಲೇಶನ್‌ಗೆ ಒಳಪಡಿಸಲಾಗಿದೆ. ಓರ್ವ ವ್ಯಕ್ತಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೋವಿಡ್ ಸೋಂಕಿನಿಂದ ಸೋಮವಾರ ಯಾವುದೇ ವ್ಯಕ್ತಿ ಮೃತಪಟ್ಟಿಲ್ಲವೆಂದು ಆರೋ ಗ್ಯ ಇಲಾಖೆ ದೃಢಪಡಿಸಿದ್ದು, ಜಿಲ್ಲೆಯಲ್ಲಿ ಇದುವರೆಗೂ ೫೦,೯೨೫ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ೫೦,೧೩೦ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ೩೭೯ಮಂದಿ ಯಲ್ಲಿ ಸೋಂಕು ಸಕ್ರೀಯವಾಗಿದ್ದು, ೩೯೫ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

























Discussion about this post