ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಗಿರಿರಾಜ್ ನಾಪತ್ತೆ ನಿಗೂಢವಾಗಿದ್ದು, ಅನುಮಾನದ ಹುತ್ತಕ್ಕೆ ಕಾರಣವಾಗಿದೆ.
ಕೆಲಸದಲ್ಲಿ, ಸಮಯ ನಿರ್ವಹಣೆಯಲ್ಲಿ ಶಿಸ್ತು ಮೆರೆದಿದ್ದ ಆತ ಶಾಸಕರ, ಸಂಸದರ ಅನುದಾನ ಬಳಕೆ ವಿಭಾಗದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದ.
ನಾಪತ್ತೆಗೂ ಮುನ್ನ ಸುದೀರ್ಘ ಪತ್ರ ಬರೆದಿದ್ದು, ಅದರಲ್ಲಿ ರಾಜ್ಯದ ಕಾರ್ಯದರ್ಶಿ ಗಳಲ್ಲೊಬ್ಬರಾದ ಶಾಲಿನಿ ರಾಜನೀಶ್, ಡಿಸಿ ಮತ್ತಿತರರ ಕುರಿತು ಆಪಾದನರ ಮಾಡಿರುತ್ತಾರೆ.
ಇದೇ ಪತ್ರದಲ್ಲಿ ಮಗಳು, ಅಮ್ಮ, ಪತ್ನಿ, ಅಣ್ಣ ಮೊದಲಾದವರಿಗೆ ತಿಳಿಮಾತು ಬರೆದಿದ್ದಾರೆ. ಅವರ ಫೋನ್ ಭದ್ರಾವತಿ ಬಳಿ ಎರೆಹಳ್ಳಿ ಎಂಬಲ್ಲಿ ಸ್ವಿಚ್ ಆಫ್ ಆಗಿದೆ. ವಾಟ್ಸಪ್ ಪತ್ರ ಬರೆದ ನಂತರ ಅವರು ಇನ್ನು ಪತ್ತೆಯಾಗಿಲ್ಲ.

























Discussion about this post