ಲೈಂಗಿಕ ಸಂಭಾಷಣೆಯ ವಿಡಿಯೋದಲ್ಲಿ ನನ್ನನ್ನು ಹೋಲುವಂತೆ ಮಾರ್ಫ್ ಮಾಡಿ ಅಥವಾ ತಿರುಚಿದ ವಿಡಿಯೋ ದೃಶ್ಯಾವಳಿಯನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ,ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.
ಡಿವಿಎಸ್ಹೋಲುವಂತಹ ವ್ಯಕ್ತಿಯೊಬ್ಬರು ಯುವತಿಯೊಂದಿಗೆ ಲೈಂಗಿಕ ಸಂಭಾಷಣೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿತ್ತು.
ಸೈಬರ್ ಕ್ರೈಮ್ ಗೆ ಈ ಕುರಿತು ದೂರು ನೀಡಿದ್ದು, ಅಪರಾಧಿಗಳನ್ನು ಶೀಘ್ರವೇ ಬಂಧಿಸುವರು ಎಂಬ ನಂಬಿಕೆ ಇದೆ ಎಂದು ಅವರ ಹೇಳಿದ್ದಾರೆ.
ನ್ಯಾಯಾಲಯ ತಡೆಯಾಜ್ಞೆ ಅನುಸಾರ ಆ ತಿರುಚಿದ ವಿಡಿಯೋ ಫಾವರ್ಡ್, ಅಪ್ ಲೋಡ್ ಮಡುವವರು ಸಹ ಕಾನೂನಿನ ಸಂಬಂಧಿತ ವಿಭಾಗದ ಪ್ರಕಾರ ಶಿಕ್ಷೆ ಆಗುತ್ತದೆ, ಹೀಗೆ ಮಾಡುವವರ ಬಗ್ಗೆ ಯಾರಿಗಾದರೂ ಮಾಹಿತಿ ಗೊತ್ತಿದ್ದಲ್ಲಿ ಅದರ ಬಗ್ಗೆ ತಿಳಿಸುವಂತೆ ಸಹ ಮನವಿ ಮಾಡಿದ್ದಾರೆ.

























Discussion about this post