ಬೆಂಗಳೂರು: ಇತ್ತೀಚೆಗೆ ದೇಗುಲಗಳ ತೆರವಿನಿಂದ ಉಂಟಾದ ವಿವಾದದ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಈ ಬಗ್ಗೆ ವಿಧೇಯಕದ ಮೂಲಕ ಹೊಸ ನಿಯಮಾವಳಿ ರೂಪಿಸಲು ನಿರ್ಧಾರ ಕೈಗೊಂಡಿದೆ. ಅದರ ಪ್ರಕಾರ ಕೋರ್ಟ್ ತೀರ್ಪು ಇದ್ದರೂ ಸಹ ಸರ್ಕಾರದ ನಿಯಮಗಳಿಗೆ ಒಳಪಟ್ಟಂತೆ ಆಯಾ ಧಾರ್ಮಿಕ ಸ್ಥಳ ಇದ್ದಲ್ಲಿ, ಅಂತಹ ಧಾರ್ಮಿಕ ಸಂಸ್ಥೆಗಳ ಜಾಗಗಳನ್ನ ತೆರವು ಮಾಡುವಂತಿಲ್ಲ ಎಂದು ನೂತನ ನಿಯಮಾವಳಿ ರೂಪಿಸಲು ಸರ್ಕಾರ ತೀರ್ಮಾನಿಸಿದೆ.
ಸರ್ಕಾರದ ನಿಯಮಗಳ ಹೊರಗಿದ್ದರೆ ಮಾತ್ರ ಅಂತಹ ಧಾರ್ಮಿಕ ಸ್ಥಳ ತೆರವುಗೊಳಿಸಬಹುದು, ಅಂತಹ ಧಾರ್ಮಿಕ ಸಂಸ್ಥೆಗಳ ಕಟ್ಟಡಗಳನ್ನು ಮಾತ್ರ ತೆರವು ಮಾಡಬಹುದು ಎನ್ನಲಾಗಿದೆ.
ವಿಧೇಯಕ ಅಂಗೀಕಾರವಾದ ನಂತರವಷ್ಟೇ ನಿಯಮಾವಳಿ ಜಾರಿಗೆ ಬರಲಿದೆ. ಶೀಘ್ರದಲ್ಲೇ ಈ ಕುರಿತು ಸರ್ಕಾರ ನಿಯಮಾವಳಿ ರೂಪಿಸುವ ಸಾಧ್ಯತೆಗಳು ಹೆಚ್ಚು ಇವೆ.
ವಿಧೇಯಕದ ಮೂಲಕ ಹೊಸ ನಿಯಾಮಾವಳಿ ರೂಪಿಸಲು ಸರ್ಕಾರ ನಿರ್ಧಾರ ಮಾಡಿದೆ. ನ್ಯಾಯಾಲಯದ ತೀರ್ಪು ಇದ್ದರೂ ಸರ್ಕಾರದ ನಿಯಮಗಳಿಗೆ ಒಳಪಟ್ಟಂತೆ ಇದ್ದರೆ ಆ ಧಾರ್ಮಿಕ ಸಂಸ್ಥೆಗಳನ್ನು ತೆರವು ಮಾಡುವಂತಿಲ್ಲ. ಸರ್ಕಾರದ ನಿಯಮಾವಳಿಯಿಂದ ಹೊರಗೆ ಇದ್ದರೆ ಆ ಧಾರ್ಮಿಕಸಂಸ್ಥೆಗಳ ಕಟ್ಟಡಗಳು ಮಾತ್ರ ತೆರವು ಮಾಡಬಹುದು. ಈ ವಿಧೇಯಕ ಅಂಗೀಕಾರಗೊಂಡ ನಂತರ ಶೀಘ್ರದಲ್ಲೇ ನಿಯಮಾವಳಿ ರೂಪಿಸುವ ಸಾಧ್ಯತೆ ಇದೆ.
ನಿಯಮಾವಳಿಯನ್ನು ರಾಜ್ಯ ಸರ್ಕಾರ ರೂಪಿಸಿದ ನಂತರವಷ್ಟೇ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಧಾರ್ಮಿಕ ಕಟ್ಟಡಗಳನ್ನು ಹೊಸದಾಗಿಯೂ ನಿರ್ಮಿಸಲು ಸಹ ಅವಕಾಶ ಇರುವುದಿಲ್ಲ. ಸರಕಾರಕ್ಕೆ ಸೇರಿದ ಜಾಗದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮುಂದೆ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದು ಸಹ ಹೇಳಲಾಗಿದೆ.
ಸಂಪುಟ ಸಭೆಯ ಇತರೆ ತೀರ್ಮಾನಗಳು ಏನೇನು..
• ಇಂದು (ಸೆ.೨೦)ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಪ್ರಾರ್ಥನಾ ಮಂದಿಗಳ ಸಂರಕ್ಷಣೆಗಾಗಿ ತಿದ್ದುಪಡಿ ವಿಧೇಯಕ ಮಂಡನೆಗೆ ನಿರ್ಧರಿಸಲಾಗಿದೆ.
• ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆಚುನಾವಣೆ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.
• ತಾಂತ್ರಿಕ ಶಿಕ್ಷಣ ಇಲಾಖೆಯ ೩ ವರ್ಷಗಳ ಡಿಪ್ಲೋಮಾ ಕೋರ್ಸ್ ಶಿಕ್ಷಣವನ್ನು ಪಿಯುಸಿ ತತ್ಸಮಾನ ವಿದ್ಯಾರ್ಹತೆ ಎಂದು ಸರ್ಕಾರಿ ನೇಮಕಾತಿಗೆ ಪರಿಗಣಿಸಲು ತೀರ್ಮಾನ
• ಕರ್ನಾಟಕ ರಾಜ್ಯ (ವಿಧಿ ವಿಜ್ಞಾನ ಪ್ರಯೋಗಾಲಯ ಸೇವೆಗಳು) (ನೇವಕಾತಿ) (ತಿದುಪಡಿ) ನಿಯಮಗಳು ೨೦೨೧ಕ್ಕೆ ಅನುಮೋದನೆ
• ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ವಿಧೇಯಕ ೨೦೨೧ಕ್ಕೆ ಅನುಮೋದನೆ
• ಕರ್ನಾಟಕ ಭೂ ಮಂಜೂರಾತಿ (ತಿದ್ದುಪಡಿ) ನಿಯಮಗಳು ೨೦೨೧ಕ್ಕೆ ಅನುಮೋದನೆ
• ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಹಾಗೂ ೧೭ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಯ ೩೮,೭೮ ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.
• ೨೦೨೧-೨೨ನೇ ಸಾಲಿಗೆ ಪರಿಶಿಷ್ಠ ಅರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಠ ಪಂಗಡದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಹಾಗೂ ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಆಹಾರ ಸಾಮಗ್ರಿಗಳು/ ಶುಚಿ ಸಂಭ್ರಮ ಕಿಟ್ ಹಾಗೂ ಶೂ ಮತ್ತು ಸಾಕ್ಸ್ ಗಳನ್ನು ಒಟ್ಟು ೬೯,೪೯ಕೋಟಿ ರೂ. ಅಂದಾಜು ಮೊತ್ತದಲ್ಲಿ ಒದಗಿಸಲು ಅನುಮೋದನೆ.
• ನವೆಂಬರ್ ೪, ೨೦೧೯ರ ಸರ್ಕಾರಿ ಆದೇಶದಲ್ಲಿ ಅನುಮೋದನೆ ನೀಡಿರುವ “ಶುಭ್ರ ಬೆಂಗಳೂರು” ಯೋಜನೆಯಲ್ಲಿ ನಮೂದಿಸಿರುವ ಕಾಮಗಾರಿಯ ಬದಲಿಗೆ ಮಲ್ಲತ್ತಹಳ್ಳಿ ಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆಯುವ ಕಾಮಗಾರಿಗಳನ್ನು ೨೨.೪೦ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

























Discussion about this post