ಕ್ಯಾನ್ಬೆರಾ: ಕೋವಿಡ್-19 ನಿಯಮದ ಕಾರಣ ಸ್ವದೇಶಕ್ಕೆ ಬರಲು ಆಗದೆ ನ್ಯೂಜಿಲೆಂಡ್ನಲ್ಲಿ ಸಿಲುಕಿರುವ ತಮ್ಮ ಮುದ್ದಿನ ಸಾಕು ನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆಯಿಸಿಕೊಳ್ಳಲು ದಂಪತಿ ಹತ್ತಾರು ಸಾವಿರ ಡಾಲರ್ ವ್ಯಯಿಸಿ ಖಾಸಗಿ ವಿಮಾನ ಬುಕ್ ಮಾಡುತ್ತಿದ್ದಾರೆ. ಶ್ವಾನವು ಕ್ರಿಸ್ಮಸ್ ವೇಳೆಗೆ ಸ್ವದೇಶಕ್ಕೆ ಮರಳಲಿದೆ.
ಮಂಚ್ಕಿನ್ ಹೆಸರಿನ ನಾಯಿ ಆಸ್ಟ್ರೇಲಿಯಾದ ಸನ್ಶೈನ್ ಕೋಸ್ಟ್ನಲ್ಲಿ ಸಿಲುಕಿದೆ. ಆದರೆ, ಕೋವಿಡ್-19 ನಿರ್ಬಂಧದ ಕಾರಣ ನ್ಯೂಜಿಲೆಂಡ್ನ ಬಾಲಿ ಸ್ಟ್ರೀಟ್ನಲ್ಲಿ ಐದು ತಿಂಗಳಿಂದ ಸಿಲುಕಿಕೊಂಡಿದೆ. ಈಗ 45,000 ಆಸ್ಟ್ರೇಲಿಯನ್ ಡಾಲರ್ ವೆಚ್ಚ ಮಾಡಿ (24.23 ಲಕ್ಷ ರೂಪಾಯಿ) ಈ ಶ್ವಾನವನ್ನು ನ್ಯೂಜಿಲೆಂಡ್ನ ದಕ್ಷಿಣ ದ್ವೀಪದಿಂದ ಸನ್ಶೈನ್ ಕೋಸ್ಟ್ ಬಳಿಯ ವಿಮಾನ ನಿಲ್ದಾಣಕ್ಕೆ ಕರೆತರಲು ಉದ್ದೇಶಿಸಲಾಗಿದೆ.
ಹಣ ಮುಖ್ಯವಲ್ಲ, ಕ್ರಿಸ್ಮಸ್ ಸಂಭ್ರಮವೇ ಪ್ರಧಾನ. ಎಲ್ಲರೂ ಒಗ್ಗೂಡಿ ಕ್ರಿಸ್ಮಸ್ ಆಚರಿಸಬೇಕು ಎಂದು ಶ್ವಾನದ ಮಾಲೀಕ ತಾಶ್ ಕಾರ್ಬಿನ್ ದಂಪತಿ ಹೇಳಿದ್ದಾರೆ. ವಿಮಾನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ನಾಲ್ಕೈದು ಪ್ರಯಾಣಿಕರನ್ನು ಈ ದಂಪತಿ ಹುಡುಕುತ್ತಿದ್ದಾರೆ. ವಿಮಾನದ ಆಸನವನ್ನು ಅವರಿಗೆ ನೀಡಿ ಶುಲ್ಕ ಪಡೆಯುವ ಇರಾದೆ ಈ ದಂಪತಿಗೆ ಇದೆ.
ಮಂಚ್ಕಿನ್ ಮೂಲತಃ ಇಂಡೋನೇಷ್ಯಾದ ತಳಿ ಶ್ವಾನವಾಗಿದ್ದು, ಇಂಡೋನೇಷ್ಯಾದ ಬಾಲಿಯಿಂದ ಐದು ವರ್ಷದ ಹಿಂದೆ ಇದನ್ನು ಕಾರ್ಬಿನ್ ದಂಪತಿ ಖರೀದಿಸಿದ್ದಾರೆ. ಸಿಂಗಾಪುರದಲ್ಲಿ ಈ ಶ್ವಾನ ಮೂರು ವರ್ಷ ಇತ್ತು. ಆಗಲೇ ಕೋವಿಡ್-19 ಸಾಂಕ್ರಾಮಿಕ ಕಾಣಿಸಿಕೊಂಡಿತು. ಆಸ್ಟ್ರೇಲಿಯಾಕ್ಕೆ ಇದನ್ನು ಕರೆತರಲು ಇಪತ್ತೆಂಟು ನಿಯಮಗಳ ತೊಡಕು ಎದುರಾಯಿತು. ಹೀಗಾಗಿ ನ್ಯೂಜಿಲೆಂಡ್ಗೆ ಕರೆತರಲಾಯಿತು. ಈಗ ಅಲ್ಲಿಂದ ಅದನ್ನು ಆಸ್ಟ್ರೇಲಿಯಾಕ್ಕೆ ಕರೆಯಿಸಿಕೊಳ್ಳುತ್ತಿದ್ದಾರೆ.
Australian Couple Plan Private Jet Flight For Dog Stranded By Covid Rules
ಇದನ್ನು ಓದಿ: ಭಾರತದಲ್ಲಿ 6.20 ಕೋಟಿ ಬೀದಿ ನಾಯಿ, 91 ಲಕ್ಷ ಬೆಕ್ಕುಗಳಿವೆ!
ಇದನ್ನೂ ಓದಿ: ಕಾನ್ಪುರದ ಸರ್ಕಾರಿ ಕಚೇರಿಯಿಂದ ಕಡತ ಕದ್ದೋಡಿದ ಮೇಕೆ ಹಿಂದೆ ಬಿದ್ದ ನೌಕರ!
Discussion about this post