ಶಿವಮೊಗ್ಗ: ನೂರಾ ಐವತ್ತುಕ್ಕೂ ಹೆಚ್ಚಿನ ಬೀದಿನಾಯಿಗಳನ್ನು ಶಿವಮೊಗ್ಗದ ಭದ್ರಾವತಿಯಲ್ಲಿಜೀವಂತ ಸಮಾಧಿ ಮಾಡಲಾಗಿದೆ. ಈ ದುಷ್ಕೃತ್ಯ ನಡೆದಿರುವುದು ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗನಾಥಪುರ ಎಂಬಲ್ಲಿ. ತಮ್ಮಡಿಹಳ್ಳಿಯ ಅರಣ್ಯ ಪ್ರದೇಶದಲ್ಲಿ ಜೀವಂತವಾಗಿ ನಾಯಿಗಳನ್ನು ಹೂತಿದ್ದಾರೆ. ಸ್ಥಳೀಯರಿಗೆ ನಾಯಿಗಳ ಚೀರಾಟ ಕೇಳಿಸಿದ್ದು, ನಂತರ ಯಾವುದೇ ರೀತಿ ವಿಷಯ ಗೊತ್ತಾಗಿಲ್ಲ.
ಪ್ರಾಣಿ ದಯಾಸಂಘಕ್ಕೆ ಈ ಕುರಿತು ಮಾಹಿತಿ ನೀಡಿದ್ದು, ಸಂಘದ ಸದಸ್ಯರು ಆಗಮಿಸಿ ಸತ್ಯಾಂಶ ಬಯಲಿಗೆಳೆದಿದ್ದಾರೆ. ನಾಯಿಯ ಹೊಡಿದು ಸಂತಾನ ಹರಣ ಚಿಕಿತ್ಸೆ ನಡೆಸಲು ಮೈಸೂರು ಮೂಲದವರು ಟೆಂಡರ್ ಪಡೆದಿದ್ದು, ಹಣ ಹೋಲ್ ಸೇಲ್ ಉಳಿಸಲು ಈ ಕುಕೃತ್ಯ ಎಸಗಿರಬಹುದು ಎಂದು ಊಹಿಸಲಾಗಿದೆ. ಭದ್ರಾವತಿ ಗ್ರಾಮಿಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

























Discussion about this post