ಗುಜರಾತ್: ತಾಳಿ ಕಟ್ಟಿದ ಹೆಂಡತಿಯನ್ನೇ ವ್ಯಕ್ತಿಯೋರ್ವನು 500 ರೂಪಾಯಿಗೆ ಮಾರಾಟ ಮಾಡಿದ ಅಮಾನವೀಯ ಘಟನೆ ಜೊತೆಗೆ ಆಕೆಯನ್ನು ಖರೀದಿಸಿದ ವ್ಯಕ್ತಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿರುವ ಪೈಶಾಚಿಕ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಸೋನು ಶರ್ಮಾ ಎಂಬಾತನೇ ಅತ್ಯಾಚಾರವೆಸಗಿದ ಆರೋಪಿ. 21 ವರ್ಷದ ಮಹಿಳೆ ತನ್ನ ಪತಿಯ ಜೊತೆಗೆ ಹೋಟೆಲ್‌ವೊಂದಕ್ಕೆ ತೆರಳಿದ್ದಾರೆ. ಈ ವೇಳೆಯಲ್ಲಿ ಆರೋಪಿ ಸೋನು ಶರ್ಮಾ ಎಂಬಾತನಿಗೆ ಪತ್ನಿಯನ್ನು ಐದು ನೂರು ರೂಪಾಯಿಗೆ ಮಾರಾಟ ಮಾಡಿದ್ದಾನೆ.
ನಂತರ ಮಹಿಳೆಯನ್ನು ಆರೋಪಿ ಸೋನುಶರ್ಮಾ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ ಕುರಿತು ಮಹಿಳೆ ಸ್ಥಳೀಯ ಠಾಣೆಗೆ ದೂರು ನೀಡಿದ್ದಾಳೆ. ಈ ವೇಳೆಯಲ್ಲಿ ತನ್ನ ಮೇಲೆ ಪೈಶಾಚಿಕ ಕೃತ್ಯವೆಸಗಿರೋದನ್ನು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರ ಮೇಲೆ ೨೪ ಗಂಟೆಯ ಒಳಗೆ ಪೊಲೀಸರು ಮಹಿಳೆಯ ಪತಿ ಹಾಗೂ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ನಡೆಸುತ್ತಿದ್ದಾ

























Discussion about this post