ತಾಲ್ಲೂಕ್ ಕಛೇರಿ, ನಾಡ ಕಛೇರಿ ಹಾಗು ಗ್ರಾಮ ಪಂಚಾಯಿತಿಗಳಲ್ಲಿ ದೊರೆಯುತ್ತಿದ್ದ ಪಹಣಿಗಳು ಇನ್ನು ಮುಂದೆ ಆನ್ಲೈನ್ನಲ್ಲಿ ದೊರೆಯುವುದರಿಂದ ತಾಲ್ಲೂಕ್ ಕಛೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು , ವಿದ್ಯುತ್ ಸಮಸ್ಯೆ, ಸರ್ವರ್ ಸಮಸ್ಯೆ, ಪ್ರಿಂಟರ್ ಸಮಸ್ಯೆ, ಪೇಪರ್ ಇಲ್ಲ ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್ ಬಿದ್ದಿದೆ.
ಸರ್ಕಾರವು ಕೃಷಿ ಜಮೀನಿಗೆ ಸಂಭಂದಿಸಿದ ಭೂ ದಾಖಲೆ ಅಥವಾ ಪಹಣಿಯನ್ನು ಇನ್ನು ಮುಂದೆ ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮುಖಾಂತರ 10Rs ಪಾವತಿಸುವ ಮೂಲಕ ಪಡೆಯಲು BMC (Bhoomi Monitoring Cell) ನೆರವಿನಿಂದ ತಂತ್ರಾಂಶವನ್ನು ಅಭಿವೃದ್ದಿ ಪಡಿಸಿದ್ದು, ಸರ್ಕಾರದ ಈ ಪ್ರಯತ್ನವು ದೇಶದಲ್ಲೇ ಮೊದಲು. ಈ ಪಹಣಿಯು ಎಲ್ಲಾ ಭದ್ರತಾ ವಿಶೇಷತೆಗಳನ್ನು ಹೊಂದಿರುತ್ತದೆ. ಈ ಪಹಣಿಯನ್ನು ಸರ್ಕಾರದ ಯೋಜನೆಗಳಿಗೆ ಬಳಸಬಹುದು.
URL : http://landrecords.karnataka.gov.in
LINK : iRTC
ವಿಧಾನ :
1. ಬ್ರೌಸರ್ ನಲ್ಲಿ http://landrecords.karnataka.gov.in open ಮಾಡಿ
2. ನಿಮ್ಮ ಹೆಸರು ಮತ್ತು ಇತರೆ ಮಾಹಿತಿಯನ್ನು ನೋಂದಾಯಿಸುವ ಮೂಲಕ ಭೂಮಿ ಪೋರ್ಟಲ್ ನಲ್ಲಿ ಖಾತೆಯನ್ನು ತೆರೆದು, ನೋಂದಾಯಿತ ಅಥವಾ ಅತಿಥಿ ಬಳಕೆದಾರರಾಗಿ ಒಳ ಪ್ರವೇಶಿಸಿ
3. ನಿಮಗೆ ಬೇಕಾದ ಜಿಲ್ಲೆ , ತಾಲ್ಲೂಕ್, ಹೋಬಳಿ, ಗ್ರಾಮ ಹಾಗು ಸರ್ವೇ ನಂಬರ್ ನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಪಹಣಿ ಯನ್ನು ವೀಕ್ಷಿಸಿ ನಂತರ PAY and DOWNLOAD ಬಟನ್ ಒತ್ತುವ ಮೂಲಕ SBI Payment gatewayಗೆ ಪ್ರವೇಶಿಸಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಆಯ್ಕೆಯ ಮೂಲಕ 10Rs ಪಾವತಿಸಿ ಸದರಿ ವರ್ಷದ ಪಹಣಿ ಯನ್ನು print ತೆಗೆದುಕೊಳ್ಳಬಹುದು
4. ಪಹಣಿಯ ನೈಜತೆಯನ್ನು http://landrecords.karnataka.gov.in/service5/ ವೆಬ್ ಸೈಟ್ನಲ್ಲಿ ಪಹಣಿ ಯಲ್ಲಿ ಮುದ್ರಿತವಾಗಿರುವ ಭೂಮಿ ಅನನ್ಯ ಸಂಖ್ಯೆಯನ್ನು ನಮೂದಿಸುವ ಮೂಲಕ ಪರೀಕ್ಷಿಸಿಕೊಳ್ಳಬಹುದು ಅಥವಾ KA BHOOMI <ಭೂಮಿ ಅನನ್ಯ ಸಂಖ್ಯೆಯನ್ನು> 161 ಗೆ SMS ಕಳಿಸುವ ಮೂಲಕ ಪರೀಕ್ಷಿಸಿ ಕೊಳ್ಳಬಹುದು

























Discussion about this post