ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಫ್ಲೆಕ್ಸ್ ಹಾಕಿದ್ದು, ಅದರಲ್ಲಿ ಅನ್ಯಧರ್ಮೀಯರಿಗೆ ಪಾರ್ಕಿಂಗ್ ಇರೋದಿಲ್ಲ ಅನ್ನೋ ವಿಷಯ ಇದೀಗ ವಿವಾದಕ್ಕೆ ಕಾರಣವಾಗಿದೆ.
ಮುಜರಾಯಿ ಇಲಾಖೆಯ ದೇಗುಲವಾದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿರುವ ಮೈದಾನದಲ್ಲಿ ದೇವಾಲಯಕ್ಕೆ ಬರೋ ಭಕ್ತರಿಗೆ ಮಾತ್ರ ಪಾರ್ಕಿಂಗ್ ಅವಕಾಶ ಎಂಬ ಬೋರ್ಡ್ ತಗುಲಿ ಹಾಕಲಾಗಿದೆ.
ದೇಗುಲದ ಮುಂದೆ ದೇವರಮಾರು ಗದ್ದೆಯಲ್ಲಿ ಮುಂದಿನ ತಿಂಗಳಿಂದ ಹಿಂದೂ ಭಕ್ತರ ವಾಹನಗಳಿಗೆ ಮಾತ್ರ ಎಂಟ್ರಿ ನೀಡಲಾಗುವುದು ಎಂದು ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಕಡ್ಡಾಯವಾಗಿ ಇತರೆ ಧರ್ಮೀಯರು ಪಾಕ್ ಮಾಡುವಂತಿಲ್ಲ, ಅಕಸ್ಮಾತ್ ಪಾರ್ಕ್ ಮಾಡಿದ್ರೆ ಕಾನೂನು ಕ್ರಮ ಜರುಗಿಸೋದಾಗಿ ಸಹ ಬರೆದಿದ್ದಾರೆ.
ಇದು ನಿಜವಾಗಿಯೂ ಆಡಳಿತ ಮಂಡಳಿಯದ್ದೇ ನಿರ್ಧಾರವಾ ಅಥವಾ ಸದಸ್ಯರದ್ದಾ? ಅನ್ನೋ ಅನುಮಾನಗಳು ಸಹ ಇವೆ. ಹಿಂದೆಲ್ಲಾ ಎಲ್ಲಾ ಧರ್ಮೀಯರು ಪಾರ್ಕ್ ಮಾಡುತ್ತಿದ್ದು, ಆಗ ಕಿರಿಕ್ ಆಗುತ್ತಿತ್ತೆಂದು ಹೇಳಲಾಗಿದೆ. ಈ ಕ್ರಮದ ಪರ-ವಿರೋಧ ಮಾತುಕತೆ ನಡೆಯುತ್ತಿದೆ.

























Discussion about this post