ಬೆಂಗಳೂರು: ಬಡವರಿಂದ ಮಕ್ಕಳನ್ನ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಗುಂಪನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ದೇವಿಷಣ್ಮುಗಮ್ಮ, ಮಹೇಶ್ ಕುಮಾರ್,ರಂಜನಾ ದೇವಿಪ್ರಸಾದ್, ಧನಲಕ್ಷ್ಮಿ, ಜನಾರ್ಧನ್ ಬಂಧಿಸಲಾಗಿದೆ.
ಆರೋಪಿಗಳು ಬಡವರ ಬಳಿ ಕಡಿಮೆ ಬೆಲೆಗೆ ಮಕ್ಕಳನ್ನ ಖರೀದಿಸುತ್ತಿದ್ದರು. ನಂತರ ಮಕ್ಕಳಿಲ್ಲದ ಪೋಷಕರನ್ನ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್ ಅವರಿಗೆ ಮಕ್ಕಳನ್ನ 2 ರಿಂದ 3 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಈವರೆಗೆ 11 ಮಕ್ಕಳನ್ನ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ 18-20 ಮಕ್ಕಳನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಸವನಗುಡಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಆರೋಪಿಗಳನ್ನ ಬಂಧಿಸಲಾಗಿದ್ದು 13 ಮಕ್ಕಳನ್ನ ರಕ್ಷಣೆ ಮಾಡಲಾಗಿದೆ.
ಬಡವರಿಂದ ಮಕ್ಕಳನ್ನು ಖರೀದಿಸಿ ನಂತರ ಖರೀದಿ ಮಾಡಿದ್ದ ಮಕ್ಕಳ ಹೆತ್ತವರ ಹೆಸರನ್ನು ಮುಚ್ಚಿಟ್ಟು ಮತ್ತೊಬ್ಬ ಮಹಿಳೆಯನ್ನು ತೋರಿಸಿ ಇವರೇ ಮಕ್ಕಳ ತಾಯಿ ಎಂದು ನಂಬಿಸಿ ಆರೋಪಿಗಳು ಮಗುವನ್ನು ಮಾರಾಟ ಮಾಡುತ್ತಿದ್ದರು ಎಂದು ತನಿಖಾ ವೇಳೆ ತಿಳಿದುಬಂದಿದೆ.

























Discussion about this post