ಕೋಟಾ: ರಾಜಸ್ಥಾನದ ಕೋಟಾದಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 13 ಅಪರಾಧಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇತರ ಇಬ್ಬರಿಗೆ ತಲಾ ನಾಲ್ಕು ವರ್ಷ ಸಜೆಯಾಗಿದೆ. ಈ ದುರುಳರು 9 ದಿನಗಳ ಕಾಲ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಬಾಲಕಿಯನ್ನು ಅಪಹರಿಸಿದ ಮಹಿಳೆಗೆ ನಾಲ್ಕು ವರ್ಷದ ಕಠಿಣ ಕಾರಾಗೃಹ ಸಜೆ ವಿಧಿಸಲಾಗಿದೆ. ಈ ಮಹಿಳೆಯು ಬಾಲಕಿಯನ್ನು ಝಲಾವಾರ್ನಲ್ಲಿ ಮಾರಾಟ ಮಾಡಿದ್ದಳು. ಇತರ 12 ಮಂದಿ ಆರೋಪಿಗಳನ್ನು ಖುಲಾಸೆ ಆಗಿದ್ದು, ನಾಲ್ವರು ಬಾಲಾ ಆರೋಪಿಗಳ ವಿಚಾರಣೆಯನ್ನು ಬಾಲನ್ಯಾಮಂಡಲಿ ನಡೆಸುತ್ತಿದೆ.
20 ವರ್ಷ ಜೈಲು ಶಿಕ್ಷೆ ವಿಧಿಸಿದವರಿಗೆ ತಲಾ 10 ಸಾವಿರ ರೂಪಾಯಿ ಮತ್ತು ನಾಲ್ಕು ವರ್ಷ ಶಿಕ್ಷೆಯಾದವರಿಗೆ ತಲಾ 7 ಸಾವಿರ ರೂಪಾಯಿ ದಂಡವನ್ನು ಪೊಕ್ಸೋ ವಿಶೇಷ ನ್ಯಾಯಲಯದ ಹೆಚ್ಚುವರಿ ಸೆಷೆನ್ಸ್ ಜಡ್ಜ್ ಅಶೋಕ್ ಚೌಧರಿ ವಿಧಿಸಿದ್ದಾರೆ. ಪ್ರಕರಣ ಘಟಿಸಿದ 9 ತಿಂಗಳಲ್ಲೇ ಕೋರ್ಟ್ ತೀರ್ಪು ಪ್ರಕಟಿಸಿದೆ.
ಕೋಟಾದ ಮನೆಯಿಂದ ಬಾಲಕಿಯನ್ನು ಅಪಹರಿಸಿದ ಪೂಜಾ ಜೈನ್ ಎಂಬುವಳು ಆಕೆಯನ್ನು ಮಾರಾಟ ಮಾಡಿದ್ದಳು . ಕೋಟಾದ ಸುಕೇತ್ನ ಪೊಲೀಸ್ ಠಾಣೆಯಲ್ಲಿ ಅಪಹರಣ, ಮಾರಾಟ ಮತ್ತು ಸಾಮೂಹಿಕ ಅತ್ಯಾಚಾರದ ಪ್ರಕರಣ ಪೊಕ್ಸೋ ಕಾಯ್ದೆ ಅಡಿಯಲ್ಲಿ ಕಳೆದ ಮಾರ್ಚ್ 6ರಂದು ದಾಖಲಾಗಿತ್ತು.1750 ಪುಟಗಳ ಆರೋಪಪಟ್ಟಿಯನ್ನು ಪೊಲೀಸರು ಮೇ 7ರಂದು ಸಲ್ಲಿಸಿದ್ದರು.
13 Rajasthan Men Get 20 Years In Jail For Gang-Raping 15-Year-Old
ಇದನ್ನು ಓದಿ: ಕೇವಲ 9 ದಿನಗಳಲ್ಲಿ ನ್ಯಾಯಾಲಯ ತೀರ್ಪು: ಪೊಕ್ಸೊ ಆರೋಪಿಗೆ 25 ವರ್ಷ ಜೈಲು
ಇದನ್ನೂ ಓದಿ: ತಿಂಡಿ ಆಸೆಗೆ 14ರ ಬಾಲ ಬಿಕ್ಷುಕಿಗೆ ಅತ್ಯಾಚಾರ
Discussion about this post