ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಕಾಂಗ್ರೆಸ್ ಸದಸ್ಯರು ವಿವಿದೆಡೆ ನಡೆದ ದೇಗುಲ ಧ್ವಂಸ, ಗೋವು ಕಳ್ಳತನ ಖಂಡಿಸಿ, ಪಂಜಿನ ಮೆರವಣಿಗೆ ಮಾಡಿದರು. ಕೋರ್ಟಿನ ಆದೇಶವನ್ನು ಪಾಲಿಸುವುದಾಗಿ ಹೇಳಿ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಿ ರಾಜ್ಯ ಬಿಜೆಪಿ ಸರ್ಕಾರ ಪೇಚಿಗೆ ಸಿಲುಕಿದೆ. ಬಿಜೆಪಿ ಸರ್ಕಾರದ ನಡೆಯನ್ನು ಹಿಂದೂಪರ ಸಂಘಟನೆಗಳು ವಿಪಕ್ಷಗಳು ಖಂಡಿಸಿವೆ.
ಸದರಿ ಘಟನೆ ವಿರೋಧಿಸಿ ಜನಜಾಗೃತಿಗಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಕಾರ್ಕಳ ಯುವ ಕಾಂಗ್ರೆಸ್ ನೇತೃತ್ವದಲ್ಲಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್, ಕಾರ್ಕಳ ನಗರ ಕಾಂಗ್ರೆಸ್ ಸಹಯೋಗದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಕಾರ್ಕಳದ ಅನಂತಶಯನ ದೇವಸ್ಥಾನದಿಂದ ವೆಂಕಟರಮಣ ದೇವಸ್ಥಾನದವರೆಗೆ ಬೃಹತ್ ಪಂಜಿನ ಮೆರವಣಿಗೆಯಲ್ಲಿ ನೂರಾರು ಕಾಂಗ್ರೆಸ್ಸಿನ ಕಾರ್ಯಕರ್ತರು ನಾಯಕರು ಪಾಲ್ಗೊಂಡರು.
ಇದೆ ಸಮಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳು ಮೊಳಗಿದವು. ಕಾರ್ಕಳದಲ್ಲಿ ನಿರಂತರ ಗೋವುಗಳ ಕಳ್ಳತನ ಆಗುತ್ತಿದ್ದು ಸರಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿತು. ಹಿಂದು ಧರ್ಮ, ಧಾರ್ಮಿಕ ಭಾವನೆಗಳ ವಿಚಾರದಲ್ಲಿ ರಾಜಕೀಯ ಮಾಡುವ ಬಿಜೆಪಿಯ ನಡೆ ವಿರುದ್ಧ ಕಾಂಗ್ರೆಸ್ ನಾಯಕ ಸುಧೀರ್ ಮರೋಳಿ ಅಸಮಾಧಾನ ವ್ಯಕ್ತಪಡಿಸಿದರು.

























Discussion about this post