- ಸಾಮೂಹಿಕವಾಗಿ ಪೈಶಾಚಿಕ ಕೃತ್ಯ ಮೆರೆದ ಕಾಮುಕರು
- ಕತ್ತಲೆಯಲ್ಲೇ ಮಹಿಳೆಯನ್ನ ಹಿಡಿದು ಹಿಂಸೆ
- ವಿಡಿಯೋ ಚಿತ್ರಿಸಿ ವಿಕೃತಿ ಮೆರೆದ ೪ಜನರ ತಂಡ
ಯಾದಗಿರಿ: ಮಹಿಳೆಯೊಬ್ಬರನ್ನು ಕತ್ತಲೆಯಲ್ಲಿ ಬೆತ್ತಲೆಗೊಳಿಸಿ ಥಳಿಸಿದ್ದು, ಅಂಗಾಂಗಗಳನ್ನು ಮುಟ್ಟಿ ಅಮಾನವೀಯತೆಯಿಂದ ಹಿಂಸೆ ನೀಡಿದ ದುರ್ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಯಾದಗಿರಿ-ಶಹಾಪುರ ಮಾರ್ಗದ ಹೆದ್ದಾರಿ ಬಳಿ ಜಮೀನೊಂದರರಲ್ಲಿ ರಾತ್ರಿ ವೇಳೆ ಮಹಿಳೆಯನ್ನು ನಗ್ನಗೊಳಿಸಿ, ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದ ಕಾಮುಕರು ಆಕೆಯ ದೃಶ್ಯಗಳನ್ನು ವಿಡಿಯೋ ಮಾಡಿದ್ದಾರೆ.
ನಾಲ್ಕೈದು ಜನರ ತಂಡ ಈ ಅಮಾನವೀಯ ಕೃತ್ಯ ನಡೆಸಿದೆ ಎನ್ನಲಾಗಿದೆ. ಮಹಿಳೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದು, ಆಕೆಗೆ ಮೊಬೈಲ್ ತೋರಿಸುತ್ತಾ ಇದರಲ್ಲಿರುವುದು ನೀನೇ ಅಲ್ಲವೇ ಎಂದು ಮಾನಸಿಕ ಹಿಂಸೆ ನೀಡಿದ್ದು, ದೈಹಿಕವಾಗಿ ಹೊಡೆದು ಹಲ್ಲೆ ನಡೆಸಿದ್ದಾರೆ.
ಈ ದೃಶ್ಯಗಳು ವೈರಲ್ ಆಗಿದ್ದು, ಪೊಲೀಸರು ಮುಂದಿನ ಕ್ರಮಕ್ಕೆ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಹಲ್ಲೆಗೊಳಗಾದ ಮಹಿಳೆಯಿಂದಾಗಲಿ, ಆಕೆಯ ಕಡೆಯವರಾಗಲಿ ಎಲ್ಲಿಯೂ ದೂರು ನೀಡಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಆಕೆ ಇನ್ನೂ ಜೀವಂತ ಇದ್ದಾರಾ? ಎಂಬ ಶಂಕೆಯೂ ವ್ಯಕ್ತವಾಗಿದೆ.

























Discussion about this post