ನವದೆಹಲಿ: ಮಹಿಳೆಯರ ಬಗ್ಗೆ ಹಗೆಕಾರುವ ಹಾಗೂ ಸಮಾಜದ ಸಾಮರಸ್ಯಕ್ಕೆ ಕುತ್ತುಂಟು ಮಾಡುವ ಆಪಾದನೆ ಮೇಲೆ ಬಲಪಂಥೀಯ ಮೂಲಭೂತವಾದಿಗಳು ಬಳಕೆ ಮಾಡುತ್ತಿದ್ದಾರೆ ಎನ್ನಲಾದ ಬುಲ್ಲಿ ಬಾಯ್ಸ್ ಆ್ಯಪ್ನ ಗಿಟ್ಹಬ್ ಪ್ಲಾಟ್ಫಾರಂ ಅನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ (ಐಟಿ) ನಿಷೇಧಿಸಿದೆ. ಸಾಮಾಜಿಕ ಜಾಲತಾಣದ ವೇದಿಕೆ ಈ ರೀತಿ ನಿಷೇಧಕ್ಕೆ ಒಳಗಾಗುತ್ತಿರುವುದು ವರ್ಷದಲ್ಲಿ ಎರಡನೇ ಬಾರಿಗೆ ಆಗಿದೆ.
ನೂರಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಫೋಟೋವನ್ನು ಈ ಆ್ಯಪ್ನಲ್ಲಿ ಅಪ್ಲೋಡ್ ಮಾಡಿ ಇವರನ್ನು ಹರಾಜಿಗೆ ಇಡಲಾಗಿದೆ ಎಂಬ ಅಡಿಬರಹದೊಂದಿಗೆ ಅವಹೇಳನ ಮಾಡಲಾಗಿದೆ. ಇಲ್ಲಸಲ್ಲದ ಆಪಾದನೆಗಳನ್ನು ಮಾಡಿ ಅವರ ಗೌರವಕ್ಕೆ ಧಕ್ಕೆ ತರುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಐಟಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ(ಸಿಇಆರ್ಟಿ) ಗಿಟ್ಹಬ್ ಅನ್ನು ನಿಷೇಧಿಸಿದೆ. ಮುಂಬೈ ಮತ್ತು ದೆಹಲಿ ಪೊಲೀಸರು ಕೂಡ ಗಿಟ್ಹಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಫ್ಟ್ವೇರ್ ಹಂಚಿಕೆಯ ವೇದಿಕೆಯಾಗಿದ ಗಿಟ್ಹಬ್ ಆ್ಯಪ್ ಅನ್ನು ಬುಲ್ಲಿ ಬಾಯ್ಗಾಗಿ ಅಭಿವೃದ್ಧಿ ಪಡಿಸಲಾಗಿದೆ ಮತ್ತು ಇದನ್ನು ಬುಲ್ಲಿ ಬಾಯ್ಸ್ ನಿರ್ವಹಿಸುತ್ತಿದೆ. ಈ ಆ್ಯಪ್ ಬ್ಲಾಕ್ ಆಗಿರುವುದನ್ನು ಬುಲ್ಲಿ ಬಾಯ್ಸ್ ಕೂಡ ಖಚಿತ ಪಡಿಸಿದೆ.
ಸುಲ್ಲಿ ಡೀಲ್ಸ್ ಎಂಬ ಇನ್ನೊಂದು ಆ್ಯಪ್ ಕೂಡ ಬಲಪಂಥೀಯ ಮೂಲಭೂತವಾದಿಗಳ ಬಳಕೆಯ ವೇದಿಕೆ ಆಗಿದೆ. ಇದಲ್ಲೂ ಮುಸ್ಲಿಂ ಮಹಿಳೆಯರ ಮಾನಹಾನಿ ಮಾಡುವಂತಹ ಪೋಸ್ಟ್ಗಳು ಹಾಕಲಾಗುತ್ತದೆ. ಈ ಆ್ಯಪ್ ವಿರುದ್ಧವೂ ಕಳೆದ ವರ್ಷ ಕ್ರಮ ಜರುಗಿಸಲಾಗಿತ್ತು.
ಮಹಿಳೆಯರ ಮೇಲೆ ಹಗೆಯನ್ನು ಪ್ರಾವರ ಮಾಡುವ ಮತ್ತು ಕೋಮು ಸೌಹಾರ್ದಕ್ಕೆ ಹಾನಿ ಉಂಟು ಮಾಡುವ ಇಂಥ ಆ್ಯಪ್ಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದರು. ಮತ್ತು ಇದನ್ನು ಐಟಿ ಸಚಿವ ಅಶ್ಚಿನಿ ವೈಷ್ಣವ್ಗೆ ಟ್ಯಾಗ್ ಮಾಡಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಆ್ಯಪ್ ನಿಷೇಧಿಸುರವ ಬಗ್ಗೆ ವೈಷ್ಣವ್ ಟ್ವೀಟ್ ಮಾಡಿದ್ದಾರೆ.
Bulli Bai GitHub Platform Blocked
ಇದನ್ನು ಓದಿ:ಐಟಿ ದಾಳಿ ಗುರಿಯಾದ ವ್ಯಕ್ತಿ ಬಗ್ಗೆ ಬಿಜೆಪಿ- ಸಮಾಜವಾದಿ ಪಕ್ಷಗಳ ಗೊಂದಲ
ಇದನ್ನೂ ಓದಿ: ಮೋದಿಗೆ ಕ್ಲೀನ್ಚಿಟ್ ನೀಡಿದ ಎಸ್ಐಟಿ; ತನಿಖಾ ಲೋಪ ಪಟ್ಟಿ ಮಾಡಿದ ಜಾಕಿಯಾ ಜಾಫ್ರಿ
Discussion about this post