ಬೆಂಗಳೂರು: ಪಿಯು ಕಲಿಯುತ್ತಿದ್ದ ಯುವಕನೋರ್ವ ಮಾನಸಿಕ ಒತ್ತಡದಿಂದ ತಂದೆಯ ಪಿಸ್ತೂಲ್ ತೆಗೆದುಕೊಂಡು ತಲೆಗೆ ಗುರಿಯಿಟ್ಟು ಶೂಟ್ ಮಾಡಿಕೊಂಡ ಆತಂಕಕಾರಿ ಘಟನೆ ಇಂದು ಮುಂಜಾನೆ ನಡೆದಿದೆ.
ಸದಾಶಿವ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರ್ಮಿ ಸ್ಕೂಲ್ ವಿದ್ಯಾರ್ಥಿ ರಾಹುಲ್ ಭಂಡಾರಿ (೧೭) ಆತ್ಮಹತ್ಯೆಯಿಂದ ಮೃತರಾಗಿದ್ದಾರೆ.
ಎಸ್ ಎಸ್ ಎಲ್ ಸಿಯಲ್ಲಿ ಶೇ. ೯೦ರಷ್ಟು ಅಂಕ ಗಳಿಸಿದ್ದ. ಹವಾಲ್ದಾರ್ ಆಗಿದ್ದ ತಂದೆಯ ಲೈಸೆನ್ಸ್ ಇರುವ ಪಿಸ್ತೂಲ್ ನಿಂದ ತಾನೇ ಗುಂಡು ಹಾರಿಸಿಕೊಂಡಿದ್ದ, ತಲೆಯ ಎಡಭಾಗಕ್ಕೆ ಗುಂಡು ಬಿದ್ದಿದ್ದು, ಬುಲೆಟ್ ಕೂಡಾ ಮೃತ ದೇಹದ ೬ ಅಡಿ ಅಂತರದಲ್ಲಿ ಬಿದ್ದಿದೆ.
ಇವತ್ತಿನಿಂದ ಪಿಯುಸಿ ಪರೀಕ್ಷೆ ಇದ್ದು, ಪರೀಕ್ಷಾ ಸಿದ್ದತೆಗಾಗಿ ಬೆಳಿಗ್ಗೆ ೪ ಗಂಟೆಗೆ ಎದ್ದು ಓದಿಕೊಳ್ಳುತ್ತಿದ್ದ ಎಂದು ತಿಳಿದಿದ್ದರು. ಇದರ ನಡುವೆ ವಾಕ್ ಮಾಡಲು ಹೋಗಿದ್ದ ಮಗ ಫೋನ್ ಕರೆಗಳನ್ನು ಬೆಳಿಗ್ಗೆ ೬ ಗಂಟೆಯ ನಂತರ ಸ್ವೀಕರಿಸಿಲ್ಲ ಎಂಬ ಆತಂಕಗೊಂಡಿದ್ದರು ಪಾಲಕರು.
ವಿದ್ಯಾರ್ಥಿ ಉತ್ತರಾಖಂಡ್ ಮೂಲದವರಾದ ಭಗತ್ ಸಿಂಗ್ ಹಾಗೂ ಬಾಬಾ ದಂಪತಿಯ ಪುತ್ರನಾಗಿದ್ದು, ಭಗತ್ ಸಿಂಗ್ ಸೇವೆಯ ನಿವೃತ್ತ ಹವಾಲ್ದಾರ್ ಆಗಿದ್ದರು. ಕಳೆದ ೨೦ ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಿದ್ದರು. ಆರ್ ಟಿ ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡಿದ್ದರು.

























Discussion about this post