ಮೈಸೂರು: ವಿಕ್ರಮ ಎಂಬ ಆನೆಗೆ ಮದ ಬಂದ ಕಾರಣ ಪಟ್ಟದ ಆನೆಯಾಗಿ ಧನಂಜಯನನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ನಿಶಾನೆ ಆನೆಯಾಗಿ ಗೋಪಾಲಸ್ವಾಮಿ ಆನೆ ಆಯ್ಕೆಯಾಗಿದೆ. ನವರಾತ್ರಿ ಮೊದಲ ದಿನವಾದ ಇಂದು ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಸಿಂಗಾರಗೊಂಡ ಗಜಪಡೆ ಪಾಲ್ಗೊಂಡು ಕಾರ್ಯಕ್ರಮಕ್ಕೆ ಸೊಬಗು ತರಲಿದೆ.
ಆನೆಗಳನ್ನು ಶೃಂಗಾರಗೊಳಿಸಲಾಗಿದ್ದು, ಆನೆಯ ಸೊಂಡಿಲಿಗೆ ಗಂಡಬೇರುಂಡ ರಚಿಸಲಾಗಿದೆ. ಸುಮಾರು ೩೦ ವರ್ಷಗಳಿಂದಲೂ ಮಂದಿಮೋಹಲ್ಲಾ ನಿವಾಸಿಗಳಾದ ಭೋಗ ನರಸಿಂಹ ರಾಜ್, ಜಗದೀಶ್ ರಾಜ್, ನಂದ ಕಿಶೋರ್, ರಾಘವೇಂದ್ರ ಸಿಂಗ್ ಕಲಾವಿದರು ದಸರಾ ಆನೆಗಳಿಗೆ ಸಿಂಗಾರ ಮಾಡುತ್ತಾ ಬಂದಿದ್ದಾರೆ.

























Discussion about this post