ಬೆಂಗಳೂರು: ಕರೋನ ಉಪಟಳದ ನಡುವೆ 9-12 ತರಗತಿ ಮತ್ತು ಕಾಲೇಜು ಪ್ರಾರಂಭ ಮಾಡಲಾಗಿದ್ದು, ಎರಡನೆ ಹಂತದಲ್ಲಿ 1-8ನೇ ತರಗತಿಗಳ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಯೋಜನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಶಿಕ್ಷಣ ತಜ್ಞರುಅನುಮತಿ ನೀಡಿದ ಪಕ್ಷದಲ್ಲಿ 1-8ನೇ ತರಗತಿಗಳನ್ನು ಆರಂಭಿಸುವುದಾಗಿ, ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಸದ್ಯದಲ್ಲೇ ತಂತ್ರಿಕ ಸಲಹಾ ಸಮಿತಿ ತಜ್ಞರ ಸಭೆಯನ್ನು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆಸಲಿದ್ದು, ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪರಿಗಣಿಸಿ, ಕೋವಿಡ್ ಸ್ಥಿತಿಗತಿಗಳ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

























Discussion about this post