ಬೆಳಗಾವಿ: ನಮ್ಮ ಪಾಲಿನ ನೀರನ್ನು ಯಾರಿಗೂ ಉಪಯೋಗ ಮಾಡಿಕೊಳ್ಳಲು ಯೋಜಿಸಲು ಬಿಡೋದಿಲ್ಲ, ನಮ್ಮ ಸರ್ಕಾರದಲ್ಲಿ ಮಾಫಿಯಾಗಳಿಗೆ ಅವಕಾಶ ಇಲ್ಲ ಎಂದು ನೀರಾವರಿ ಸಚಿವ ಗೋವಿಂದ್ ಕಾರಜೋಳ ತಿಳಿಸಿದ್ದಾರೆ.
ಮಂತ್ರಿಯಾಗಿ ಒಂದು ತಿಂಗಳ ಅವಧಿಯಲ್ಲೇ ೨ ಬಾರಿ ದೆಹಲಿಗೆ ಹೋಗಿದ್ದು, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಮ್ಗ್ ಶೇಖಾವತ್ ಅವರ ಜೊತೆಗೆ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಸಭೆ ನಡೆ ನಡೆಸಿರುವುದಾಗಿ ಸಹ ಅವರು ಹೇಳಿದ್ದಾರೆ.
ಕಾನೂನು ತಜ್ನರ ಜೊತೆ ಸಭೆ ನಡೆಸಿದ್ದು, ಅಂತರಾ ರಾಜ್ಯ ಜಲವಿವಾದಗಳಲ್ಲಿ ರಾಜ್ಯದ ಪರ ತೀರ್ಪು ಬರುವಂತೆ ವಾದ ಮಾಡಲು ಮುಖ್ಯಮಂತ್ರಿಗಳು ಖಡಕ್ಕಾಗಿ ಸೂಚನೆ ನೀಡಿರುವುದಾಗಿ ಅವರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಸಿಡಬ್ಲುಸಿ ಅಧಿಕಾರಿಗಳ ಜೊತೆಗೆ ಮೀಟಿಂಗ್ ಮಾಡಿದ್ದೇವೆ. ಎತ್ತಿನಹೊಳೆ ಯೋಜನೆಯಲ್ಲಿ ನಮಗೆ ೨೪ TCM ನೀರು ಬರಲಿದೆ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಸಹ ನಡೆಸಲಾಗಿದೆ ಎಂದು ಹೇಳಿದರು.
ನಮ್ಮ ಪಾಲಿನ ನೀರು ನಾವೇ ಉಪಯೋಗ ಮಾಡಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಹೇಳಿದರು.
ಬೆಳಗಾವಿಗೆ ರಾಜ್ಯದ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದು, ಬೆಳಗಾವ್೯ಇ ಐತಿಹಾಸಿಕ ನಗರ ಎನ್ನುವುದನ್ನು ಸಾಬೀತುಪಡಿಸಬೇಕು ಎಂದು ನಿರ್ಧರಿಸಿರುವುದಾಗಿ ತಿಳಿಸಿದರು.
ಶಾಸಕರು, ಸಂಸದರು ತೀರ್ಮಾನಿಸಿದ ಪ್ರಕಾರವಾಗಿ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೆಳಗಾವಿಯ ಬೈಪಾಸ್ ರಸ್ತೆಗೆ ಬಜೆಟ್ ಘೋಷಣೆ ಮಾಡಿದ್ದು, ಕಾಮಗಾರಿ ಪ್ರಕ್ರಿಯೆ ಬೇಗ ಶುರುವಾಗಲಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಬಿಜೆಪಿ ಶಾಸಕರ ಒಗ್ಗಟ್ಟಿನಿಂದ ಅಧಿಕಾರ ಪಡೆದಂತೆ, ಬಹುತೇಕ ಮೂರು ಮಹಾನಗರ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರ ವಹಿಸಲಿದೆ ಎಂದು ಸಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯನವರು ನಾಸ್ತಿಕರೆಂದು ತಿಳಿದಿದ್ದೆವು, ಈಗ ಮುಖ್ಯಮಂತ್ರಿ ಆಗಬೇಕೆಂದು ಕೋಡಿಹಳ್ಳಿಶ್ರೀಗಳ ಮೊರೆ ಹೋಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.

























Discussion about this post