ಬೆಂಗಳೂರು: ಲೇಖಕ ರಾಮಚಂದ್ರ ಗುಹಾ ಆರ್ಯ ಈಡಿಗ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಲೇಖಕ ರಾಮಚಂದ್ರ ಗುಹಾ ವಿರುದ್ಧ ದೂರು ದಾಖಲಾಗಿದೆ.
‘ಇಂಡಿಯಾ ಆಫ್ಟರ್ ಗಾಂಧಿ’ ಕೃತಿಯಲ್ಲಿ ಆರ್ಯ ಈಡಿಗ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಪ್ರಸ್ತಾಪ ಮಾಡಿದ್ದು, ಅವರ ಬಗ್ಗೆ ಅವಹೇಳನ ನಡೆಸಿದ್ದಾರೆಎಂದ ಪ್ರಣವಾನಂದ ಸ್ವಾಮೀಜಿ ಉಪ್ಪಾರ ಪೇಟೆ ಪೋಲಿಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ರಾಮಚಂದ್ರಾ ಗುಹಾ ಅವರ ಪುಸ್ತಕ ಮುಟ್ಡುಗೋಲು ಮಾಡಲು ಒತ್ತಾಯಿಸಲಾಗಿದೆ. 2007ರಲ್ಲಿ ಈ ಪುಸ್ತಕ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗಿದ್ದು, ನಂತರ ಹಿಂದಿ ಭಾಷೆಗೆ ಅನುವಾದ ಮಾಡಲಾಗಿತ್ತು.

























Discussion about this post