ಬೆಂಗಳೂರು: ಕರ್ನಾಟಕ ರಾಜ್ಯವು ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ದವಿದ್ದು, ಕೇಂದ್ರದ ಸಹಯೋಗದೊಂದಿಗೆ ರಾಜ್ಯದಲ್ಲಿ ನಿರ್ಧಿಷ್ಟವಾಗಿ ಹಮ್ಮಿಕೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ವರದಿ ಸಲ್ಲಿಸಲು ರೈತರನ್ನೊಳಗೊಂಡ ಸಮಿತಿಯನ್ನು ರಚಿಸಲಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಗೃಹ ಕಛೇರಿ ಕೃಷ್ಣಾದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರಿಗಳ ಸಮಿತಿಯ ಅಧ್ಯಕ್ಷ ನಿವೃತ್ತ IAS ಅಧಿಕಾರಿ ಅಶೋಕ್ ದಳವಾಯಿ ವರದಿಯ ಪರಿಶೀಲನೆ ಮತ್ತು ಚರ್ಚೆಯ ನಂತರ ಈ ವಿಚಾರವನ್ನು ಮನವರಿಕೆ ಮಾಡಿದ್ದಾರೆ.
ಕೃಷಿ ಉತ್ಪಾದನೆ ಕೇಂದ್ರಿತ ಆದರೆ ಅದನ್ನು ಆದಾಯ ಕೇಂದ್ರಿತವಾಗಿ ಮಾಡಬೇಕು. ರೈತರ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕು. ಸಮಿತಿಯು ಈ ನಿಟ್ಟಿನಲ್ಲಿ ಕೇಂದ್ರದ ಸಮಿತಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಬೇಕಾಗಿದೆ.
ಕರ್ನಾಟಕ ರಾಜ್ಯದ ಕೃಷಿ ಚಟುವಟಿಕೆ, ಹವಾಮಾನ, ಭೂ ಒಡೆತನ ವಿಷಯಗಳಲ್ಲಿ ಅತ್ಯುತ್ತಮ ದತ್ತಾಂಶ ಹೊಂದಿದ್ದು ಇದರ ಆಧಾರದ ಕಾರ್ಯತಂತ್ರ ರೂಪಿಸುವ ಕುರಿತು ಸಮಿತಿಯು ವರದಿ ನೀಡಬೇಕು ಎಂದು ಸಿಎಂ ತಮ್ಮ ರೈತಪರ ನಿಲುವು ಪ್ರಸ್ತುತಪಡಿಸಿದ್ದಾರೆ.
ಕೃಷಿ ಸವಿವರ ನಾಯಕತ್ವದ ಸಮಿತಿ: ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಗಳು ರೈತ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಿರಬೇಕು. ರಾಜ್ಯದ ಕೃಷಿ ವಲಯದಲ್ಲಿ ಬೀಜ, ಗೊಬ್ಬರ ಹಾಗೂ ಕೀಟ ನಿರ್ವಹಣೆಗೆ ಕೃಷಿ ವಿವಿ.ಗಳ ನೆರವಿನಿಂದ ಕ್ರಮ ಕೈಗೊಳ್ಳಲು, ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗುವುದು.
ಪ್ರತ್ಯೇಕ ನಿರ್ದೇಶನಾಯಲ ಸ್ಥಾಪನೆ: ಕೃಷಿ, ತೋಟಗಾರಿಕೆ, ಡೈರಿ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗ್ರಾಮೀಣ-ಗುಡಿ ಕೈಗಾರಿಕೆಗಳ ಮೂಲಕ ರೈತರ ಆದಾಯ ಧ್ವಿಗುಣಗೊಳಿಸುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಠಿಸಲು ಅನುಕೂಲವಾಗುವಂತೆ ಸೆಕೆಂಡರಿ ಅಗ್ರಿಕಲ್ಚರ್ (ಡೈರೆಕ್ಟರೇಟ್) ನಿರ್ದೇಶನಾಲಯ ಸ್ಥಾಪನೆ ಮಾಡಲಾಗುವುದು. ಇದರಿಂದ ಉದ್ಯೋಗ ಸೃಷ್ಠಿಯಾಗುವುದರ ಜೊತೆಗೆ ರೈತರ ಆದಾಯ ಧ್ವಿಗುಣಗೊಳ್ಳುವ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕ ಸಚಿವ ಮುನಿರತ್ನ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

























Discussion about this post