ಬೆಂಗಳೂರು: ಹತ್ತು ದಿವಸ ಮಹಾನಗರದ ಮಣಿಪಾಲ್ ಹಾಸ್ಪೆಟಲ್ ನಲ್ಲಿ ಅಪ್ಪ-ಮಗ- ತಾತ ತುತ್ತು ಅನ್ನಕ್ಕೂ ಪರದಾಡುತ್ತಾ ಇರುವಾಗ ಅದೇಗೋ ಇಂದಿರಾ ಕ್ಯಾಂಟಿನ್ ಅನ್ನಕೊಟ್ಟಿತ್ತು.
ಅಪ್ಪನಿಗೆ ಕ್ಯಾನ್ಸರ್, ಉಸಿರಾಟ ಕೂಡಾ ಸಮಸ್ಯೆನೇ, ದಾವಣಗೆರೆಯಿಂದ ಬಂದಾಗ ೨೦ಸಾವಿರ ಕೊಟ್ಟು ಅಂಬ್ಯುಲೆನ್ಸ್ ಹತ್ತಿದ್ದರು. ತಾತನ ಜೊತೆಗೆ ೨ ಬಾಟಲ್ ನೀರು, ಎರಡು ಬಿಸ್ಕೆಟ್ ಪ್ಯಾಕ್.. ನೀರು ಬಿಸ್ಕೆಟ್ ಕಲೆಸಿ ತಿಂದು ಒಂದು ದಿನ ಹೇಗೋ ಕಳೆದಿದ್ದರು.
ಎರಡನೆ ದಿನ ರೋಗಿಯ ಅನ್ನದಲ್ಲೇ ಮಿಕ್ಕಿದ್ದು ತಿಂದಿದ್ದರು. ಹಣ ಖಾಲಿ ಆಗ್ತಾ ಇದೆ, ಅನ್ನಕ್ಕಿಲ್ಲ ದಾರಿ, ಸ್ನೇಹಿತರು ಒಂದಷ್ಟು ಹಣ ಹಾಕಿದ ಮೇಲೆ ಆಸ್ಪತ್ರೆ ಬಿಲ್ ಪಾವತಿ ಮಾಡ್ತಾ ಇದ್ರು. ಆದರೆ ಊಟಕ್ಕೆ ಹಣ ಇಲ್ಲ, ಹೀಗಿರುವಾಗ ಯಾರೋ ಹೇಳ್ತಾರೆ, ದಟ್ಟ ಉರಿಬಿಸಿಲಿನಲ್ಲಿ ಹೋಗ್ತಾ ಇದ್ದ ಅಜ್ಜಂಗೆ ಇಂದಿರಾ ಕ್ಯಾಂಟಿನಲ್ಲಿ ಊಟ ಸಿಗತ್ತೆ ಅಂತ.
ಅವತ್ತಿನಿಂದ ಹತ್ತು ದಿವಸ ಮೂರು ಹೊತ್ತಿಗಾಗುವಷ್ಟು ಕಟ್ಟಿಸಿಕೊಂಡು ಆಸ್ಪತ್ರೆಯಲ್ಲೇ ಬದುಕಿಕೊಂಡ್ರು ಮೊಮ್ಮಗ ತಾತ..
ಇದೇ ಸಂದರ್ಭ ತಾತ ಮೊಮ್ಮಗ ಧೈರ್ಯ ಮಾಡಿ ಆಸ್ಪತ್ರೆಯಿಂದ ಅಪ್ಪನನ್ನು ಕರ್ಕೊಂಡು ಊರಿಗೆ ತೆರಳಿದರು. ಆದ್ರೆ ಅವರಿಗೆ ಅನ್ನ ಕೊಟ್ಟು ಜೀವ ಉಳಿಸಿದ್ದು ಇಂದಿರಾ ಕ್ಯಾಂಟೀನ್ ಅಂತ ದಾವಣಗೆರೆಯ ಗೃಹಿಣಿ ವೀಣಾ ಮಹಾಂತೇಶ್ ಲೇಖನ ಬರೆದಿದ್ದಾರೆ.
ಬಡತನ, ಕೆಟ್ಟ ಸಮಯಗಳಲ್ಲಿ ಸಿದ್ದರಾಮಯ್ಯನವರ ಇಂದಿರಾ ಕ್ಯಾಂಟೀನ್ ನಿಜಕ್ಕೂ ಹತಭಾಗ್ಯರಿಗೆ ಜೀವ ಉಳಿಸಿದೆ.

























Discussion about this post