ಬೆಂಗಳೂರು (ಕನ್ನಡನಾಡಿ ಸುದ್ದಿಜಾಲ): ಸರ್ಕಾರವು ಈಗಾಗಲೇ ೨೦೨೧ನೇ ಸಾಲಿನ ಅತಿವೃಷ್ಟಿ, ಪ್ರವಾಹ ಪೀಡಿತ ತಾಲ್ಲೂಕುಗಳಲ್ಲಿ ಮೂಡಿಗೆರೆ ಸೇರ್ಪಡೆಯಾಗಿಲ್ಲದಿರುವುದನ್ನು ಖಂಡಿಸಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿಧಾನಸೌದದ ಬಳಿಯ ಗಾಂಧಿ ಪ್ರತಿಮೆಯ ಹತ್ತಿರ ಧರಣಿ ನಡೆಸಿದರು.
ಕರ್ನಾಟಕದ ೧೩ ಜಿಲ್ಲೆಗಳಲ್ಲಿನ ೬೧ ತಾಲ್ಲೂಕುಗಳು ಈಗಾಗಲೇ ಸೇರ್ಪಡೆಗೊಂಡ ಪಟ್ಟಿ ಘೋಷಣೆ ಮಾಡಲಾಗಿದೆ. ಆದರೆ ಮೂಡಿಗೆರೆಯಲ್ಲಿ ಅತಿಹೆಚ್ಚು ಮಳೆ ಸುರಿದಿದ್ದು, ನೂರಾರು ಜನರು ಮನೆ ಮಠ ಕಳೆದುಕೊಂಡಿದ್ದರೂ ಸಹ ಸರ್ಕಾರಕ್ಕೆ ಯಾವುದೇ ಪರಿಣಾಮ ಬಿದ್ದಿಲ್ಲ ಎಂದು ತಮ್ಮ ಜನತೆಯ ನೋವನ್ನು ತೋಡಿಕೊಂಡಿದ್ದಾರೆ.
ಕ್ಷೇತ್ರದ ಜನತೆಗೆ ನ್ಯಾಯ ಒದಗಿಸಲು ತಮ್ಮದೇ ಸರ್ಕಾರದ ವಿರುಧ್ದ ತಿರುಗಿ ಬಿದ್ದ ಶಾಸಕ ಕುಮಾರಸ್ವಾಮಿ ಕ್ಷೇತ್ರದ ಜನರಿಗಾಗಿ ಕಣ್ಣೀರು ಮಿಡಿದಿದ್ದಾರೆ. ಇದೇ ವೇಳೆ ಕ್ಷೇತ್ರದ ಜನರಿಗೆ ಸರ್ಕಾರದ ಪರಿಹಾರ ಯಾತಕ್ಕೂ ಸಾಲದು, ಆದ್ದರಿಂದ ಕ್ಷೇತ್ರವನ್ನು NDRF, SDRF ವ್ಯಾಪ್ತಿಗೆ ಸೇರಿಸಲು ಶಾಂತಿಯುತವಾಗಿ ಆಗ್ರಹಿಸಿದ್ದಾರೆ.
ನಮ್ಮ ದ್ವನಿಗೆ ನಮ್ಮ ಸರ್ಕಾರದಲ್ಲೇ ಯಾರೂ ಬೆಲೆ ಕೊಡ್ತಿಲ್ಲ, ಮೀಸಲು ಕ್ಷೇತ್ರವೆಂಬುದೇ ಇದಕ್ಕೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಮನವೊಲಿಸಲು ಆಗಮಿಸಿದ್ದ ಕಂದಾಯ ಸಚಿವ ಅವರಿಗೆ ಒಪ್ಪದ ಶಾಸಕ ಕುಮಾರಸ್ವಾಮಿಯವರನ್ನು ಮಾಜಿ ಶಾಸಕ ಡಿ.ಎನ್. ಜೀವರಾಜ್ ಮನವೊಲಿಸಲು ಯತ್ನಿಸಿದರು.

























Discussion about this post