ಮಂಗಳೂರು(ಕನ್ನಡನಾಡಿ ಸುದ್ದಿಜಾಲ): ರಾಜ್ಯದಲ್ಲಿ ಶಾಲೆ- ಕಾಲೇಜು ಪ್ರಾರಂಭಿಸಲು ತೀರ್ಮಾನಿಸಿದ್ದು, ೯ ನೇ ತರಗತಿಯಿಂದ ೧೨ ನೇ ತರಗತಿಯವರೆಗೆ ಮಾತ್ರ ಇದೇ ೨೩ ರಿಂದ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಸುದ್ಧಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ
ಈ ಕುರಿತು ವಿಷಯವನ್ನು ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರು, ಇದೇ ತಿಂಗಳ ೨೩ ರಿಂದ ಬ್ಯಾಚ್ ವೈಸ್ ಆಗಿ ೯-೧೨ ನೇ ತರಗತಿವರೆಗೆ ಆರಂಭಿಸಲಾಗುವುದು, ಬ್ಯಾಚ್ ವೈಸ್ ತರಗತಿಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದವರು ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಕೊರೊನಾ ಸೋಂಕಿನಿಂದಾಗಿ ಸಾವು-ನೋವುಗಳು ಉಂಟಾಗಿದ್ದ ಕಾರಣ ಕಳೆದೆರಡು ವರ್ಷಗಳಿಂದ ಶಾಲೆ-ಕಾಲೇಜು ಮುಚ್ಚಿದ್ದು, ಆನ ಲೈನ್ ನಲ್ಲಿ ಮಾತ್ರವೇ ವಿದ್ಯಾರ್ಥಿಗಳು ಪಾಠಕೇಳಿ, ಪರೀಕ್ಷೆ ಬರೆದಿದ್ದರು. ಶಿಕ್ಷಣ ತಜ್ಞರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

























Discussion about this post